ಬೆಂಗಳೂರು: ನಾನು ರಾಜೀನಾಮೆ ನೀಡುವಂತಾಗಲು ದೆಹಲಿಯಲ್ಲಿ ಮೂರು ಜನರು ಪಿತೂರಿ ನಡೆಸಿದ್ದಾರೆ ಎಂದು ಶಾಸಕ ಕೆ. ಎನ್. ರಾಜಣ್ಣ ಹೇಳಿದ್ದಾರೆ.
ಮುಖ್ಯಮಂತ್ರಿಗಳಿಗೆ ನನ್ನ ಸಚಿವ ಸ್ಥಾನ ಹೋಗುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲ. ಆದರೆ ಮೂವರು ಸೇರಿ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಹೈಕಮಾಂಡ್ ಮನವೊಲಿಸಲು ಸಿಎಂ ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ. ಸಿದ್ದರಾಮಯ್ಯ ವಿಧಾನಸೌಧದಲ್ಲಿ ಇರುವಾಗ ರಾಹುಲ್ ಗಾಂಧಿ ಕರೆ ಮಾಡಿದ್ದರು. ಏನು ಮಾತನಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇದು ಹೇಳಿಕೆ ಅಲ್ಲ, ಸತ್ಯ ವಿಷಯ ಎಂದು ಅವರು ತಿಳಿಸಿದ್ದಾರೆ.
ರಾಜಕಾರಣದಲ್ಲಿ ಏಳುಬೀಳು ಹೊಸತಲ್ಲ. ನಾನು ಸೋಲು ಗೆಲುವನ್ನು ಒಂದೇ ರೀತಿಯಲ್ಲಿ ಸ್ವೀಕರಿಸುತ್ತೇನೆ. ಸ್ವಾರ್ಥ ರಾಜಕಾರಣ ಮಾಡುವುದಿಲ್ಲ. ಸಮಯ ಬಂದಾಗ ನನಗೆ ಸಚಿವ ಸ್ಥಾನ ಸಿಗುತ್ತದೆ ಎಂದು ನುಡಿದಿದ್ದಾರೆ.
























