ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮುಂಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ನಗರದ ಬಾವುಟ ಗುಡ್ಡೆಯಲ್ಲಿರುವ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಮುಂಭಾಗದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು .
ಶಾಸಕ ವೇದವ್ಯಾಸ ಕಾಮತ್ ಸಮರವೀರ ರಾಮಯ್ಯರ ತ್ಯಾಗ ಬಲಿದಾನದ ಕುರಿತು ಮಾತನಾಡಿದರು.

ತುಳು ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಅವರು ರಾಮಯ್ಯ ಗೌಡರ ವೀರ ಮರಣದ ವಿಚಾರವನ್ನು ತಿಳಿಸಿದರು.
ಅತಿಥಿಗಳಾಗಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ರಿ. ಮಂಗಳೂರು ಇದರ ಅದ್ಯಕ್ಷೆ ಸೌಮ್ಯ ಸುಕುಮಾರ್ ಬಾಗವಹಿಸಿದರು.
ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಡಿ. ಬಿ. ಬಾಲಕೃಷ್ಣ, ಕಡಬ ಒಕ್ಕಲಿಗ ಸಂಘದ ಅಧ್ಯಕ್ಷ ಸುರೇಶ್ ಬೈಲು,ಮೋಹನ ಕಲ್ಮಂಜ, ಬಾಲಕೃಷ್ಣ ಬಿ., ಕೃ ಷ್ಣಪ್ಪ ಬಿ., ಆನಂದ ಪಿ.ಎಚ್.,ರ ಕ್ಷಿತ್ ಪುತ್ತಿಲ ,ಶಿವರಾಮ ನಿನಿಕಲ್ಲು ರಾಮದಾಸ್ ಪುತ್ತೂರು, ಸುಂದರ್ ಗುಡ್ ಲೈಫ್, ಅಡ್ವೊಕೇಟ್ ವಾಸುದೇವ, ನವೀನಚಂದ್ರ ಬೋಜಾರ, ಕಿರಣ್ ಹೊಸೊಳಿಕೆ, ಮಹೇಶ್ ನಡುತೋಟ, ಗುರುದೇವ್ ಯು.ಬಿ., ರಾಮಚಂದ್ರ ಕೆ., ಮಹೇಶ್ ಮೊಂಟಡ್ಕ, ಸಾರಿಕಾ ಸುರೇಶ್ ಪಣೆಮಜಲು ಉಪಸ್ಥಿತರಿದ್ದರು.

ಈ‌ಸಂದರ್ಭದಲ್ಲಿ ವಿಶ್ವದ ಶೇಷ್ಟ ಕಾರು ಕಂಪನಿ ರೋಲ್ಸ್ ರಾಯ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂ ರಿತುಪರ್ಣ ಅವರನ್ನು ಸನ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಸ್ವಾಗತಿಸಿದರು.





















































 
 
error: Content is protected !!
Scroll to Top