ಪುತ್ತೂರು: ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲ ಪುತ್ತೂರು ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಆ. 14 ರಂದು ರಾಷ್ಟ್ರ ಧ್ವಜ ವಿತರಣೆ ನಡೆಯಿತು.

ಬ್ರಹ್ಮನಗರ ಕಾಲೋನಿ, ಕೋರ್ಟ್ ರೋಡ್, ಪ್ರಗತಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಕಡೆಗಳಲ್ಲಿ 500 ಕ್ಕೂ ಹೆಚ್ಚು ರಾಷ್ಟ್ರಧ್ವಜ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಮಂಡಲದ ಅಧ್ಯಕ್ ಶಿವಾನಂದ್ ಕಳ್ಳಿಮಾರ್, ಯುವ ಮೋರ್ಚಾ ಗ್ರಾಮಾಂತರ ಮತ್ತು ನಗರ ಮಂಡಲದ ಅಧ್ಯಕ್ಷರುಗಳಾದ ಶಿಶಿರ್ ಪೆರ್ವೋಡಿ ಮತ್ತು ನಿತೇಶ್ ಕಲ್ಲೇಗ, ಪಕ್ಷದ ಪ್ರಮುಖರು, ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
























