ಪುತ್ತೂರು ತಾಲೂಕು ಪಂಚಾಯತಿನಲ್ಲಿ 79ನೇ ಸ್ವಾತಂತ್ರ್ಯೋತ್ಸವ

ಪುತ್ತೂರು: ಭಾರತ ಸ್ವಾತಂತ್ರ್ಯ ಅನೇಕಾ ಬಲಿದಾನಗಳ ಪ್ರತೀಕ. ಅಷ್ಟೇ ಅಲ್ಲದೆ ಸಂವಿಧಾನದ ಮೂಲಕ ದೇಶ ಪ್ರಜೆಗಳು ಪಾಲಿಸಬೇಕಾದ ಕರ್ತವ್ಯವನ್ನು ಸ್ಪಷ್ಟವಾಗಿ ನೀಡಲಾಗಿದೆ. ಆದರೆ ಸ್ವಚ್ಛತೆ, ಭ್ರಾತೃತ್ವ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಜ್ಞಾವಂತ ನಾಗರಿಕರು ಸಹಕರಿಸಬೇಕು ಎಂದು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.
ಅವರು ಪುತ್ತೂರು ತಾಲೂಕು ಪಂಚಾಯಿತಿ ಆವರಣದಲ್ಲಿ 79 ನೇ ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಮ್ಮ ದೇಶದ ವೈಶಿಷ್ಟ್ಯತೆಗಳನ್ನು, ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದೇಶವನ್ನು ಬಲಿಷ್ಠವಾಗಿಸುವ ಜವಾಬ್ದಾರಿ ಮುಂದಿನ ಪೀಳಿಗೆಗೆ ಇದೆ ಎಂದು ಹೇಳಿದರು.
ಸಹಾಯಕ ನಿರ್ದೇಶಕ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಹಾಗೂ ಸಿಬ್ಬಂದಿಗಳು ಧ್ವಜ ಗೀತೆ, ರಾಷ್ಟ್ರ ಗೀತೆ ಹಾಗೂ ವಂದೇ ಮಾತರಂ ಗೀತೆಯನ್ನು ಹಾಡಿದರು.

ಈ ಸಂದರ್ಭ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಪಿ ಎಂ ಜಿ ಎಸ್ ವೈ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಚೇತನ್ ಕುಮಾರ್, ತಾಲೂಕು ಪಂಚಯಿತಿ ಸಹಾಯಕ ನಿರ್ದೇಶಕ ನಾಗೇಶ್ ಎಂ, ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ವ್ಯವಸ್ಥಾಪಕ ಜಯಪ್ರಕಾಶ್, ಸಿಬ್ಬಂದಿಗಳು ಹಾಗೂ ಅನುಷ್ಠಾನ ಇಲಾಖೆಗಳ ಸಿಬ್ಬಂದಿಗಳು, ಕೊಂಬೆಟ್ಟು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿವೃತ್ತ ಸೇನಾನಿ ಹಾಗೂ ತಾ.ಪಂ. ಸಿಬ್ಬಂದಿ ರವಿಚಂದ್ರ, ಐಇಸಿ ಸಂಯೋಜಕ ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿದರು.





















































 
 
error: Content is protected !!
Scroll to Top