ಬಂಟ್ವಾಳ: ಮರದ ಗೆಲ್ಲು ಮೈಮೇಲೆ ಬಿದ್ದು ಲಾರಿ ಚಾಲಕರೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಪೆರಾಜೆ ಗ್ರಾಮದ ಕುಡೋಲು ನಿವಾಸಿ ಜಗದೀಶ್ ಎಂದು ಗುರುತಿಸಲಾಗಿದೆ.
ಮೃತರು ಮೂಡಬಿದ್ರೆಯ ಫೀಡ್ ತಯಾರಿಕಾ ಸಂಸ್ಥೆಯಲ್ಲಿ ಲಾರಿ ಚಾಲಕರಾಗಿದ್ದು, ಕಾಸರಗೋಡು ಕಡೆಗೆ ಫೀಡ್ ಲೋಡ್ ಮಾಡಿ ಕೊಂಡು ಹೋಗುತ್ತಿದ್ದಾಗ ಬದಿಯಡ್ಕ ಸಮೀಪದಲ್ಲಿ ಮರದ ಗೆಲ್ಲು ಇವರ ಮೇಲೆ ಬಿದ್ದಿತ್ತು. ರಸ್ತೆ ಬದಿಯಲ್ಲಿ ಬಿದ್ದಿದ್ದ ಮರದ ಗೆಲ್ಲನ್ನು ಸರಿಸುವ ವೇಳೆ ಅವರ ಮೇಲೆ ಇನ್ನೊಂದು ಗೆಲ್ಲು ಬಿದ್ದು ಗಂಭೀರ ಗಾಯಗೊಂಡಿದ್ದರು.
ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
























