ಧರ್ಮಸ್ಥಳ ಪ್ರಕರಣ: 17 ನೇ ಪಾಯಿಂಟ್‌ನಲ್ಲೂ ಸಿಕ್ಕಿಲ್ಲ ಶವದ ಕುರುಹು

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ದೂರುದಾರ ಅನಾಮಿಕ ಗುರುತಿಸಿದ 17 ನೇ ಸ್ಥಳದಲ್ಲಿ SIT ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ರೀತಿಯ ಶವದ ಕುರುಹು ಲಭ್ಯವಾಗಿಲ್ಲ ಎನ್ನಲಾಗಿದೆ.

ಕನ್ಯಾಡಿಯ ದ್ವಾರಕಾಶ್ರಮದ ಗೇಟ್ ಒಳಗಿನ ಸರ್ಕಾರಿ ಜಾಗದಲ್ಲಿ 17 ನೇ ಪಾಯಿಂಟ್ ಇದ್ದು, ಅಲ್ಲಿ ಕಾರ್ಯಾಚರಣೆ ನಡೆಸಲು ದೂರುದಾರನ ಜೊತೆಗೆ SIT ಆಗಮಿಸಿದೆ.

ಈ ಸ್ಥಳಕ್ಕೆ ಖಾಸಗಿ ಗೇಟ್ ಒಂದನ್ನು ಹಾದು ಹೋಗಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ವ್ಯಕ್ತಿಯನ್ನು ಕರೆಸಿ ಗೇಟ್ ಬೀಗ ತೆಗೆದು ಒಳಗೆ ಹೋಗಬೇಕಾಯಿತು. ಆ ಖಾಸಗಿ ಜಾಗಕ್ಕೆ ಸಂಬಂಧಿಸಿದ ವ್ಯಕ್ತಿ ಸ್ಥಳದಲ್ಲಿ ಇರದೇ ಹೋದ ಕಾರಣ, ಅವರ ಬರುವಿಕೆಗಾಗಿ ‌ಸುಮಾರು ಒಂದು ತಾಸು ಕಾಯಬೇಕಾಗಿ ಬಂತು.





















































 
 

ಸುಮಾರು 3.50 ರ ವರೆಗೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಿಲ್ಲಿಸಿ ವಾಪಾಸ್ಸಾಗಿದ್ದಾರೆ.

error: Content is protected !!
Scroll to Top