ಬೆಂಗಳೂರು: ಮೆಟ್ರೋ ಉದ್ಘಾಟನಾ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿ ಅವರಿಗೆ ನೀಡಿದ ಬೆಳ್ಳಿ ವಿಗ್ರಹದ ಬಗ್ಗೆ ಸ್ಪಷ್ಟ ನೆ ನೀಡಿದ್ದು, ಬೇರೆಯವರ ಉಡುಗೊರೆಯನ್ನು ಇನ್ನೊಬ್ಬರಿಗೆ ನೀಡುವ ದುಸ್ಥಿತಿ ತಮಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಆ ಮೂಲಕ ಪ್ರಧಾನಿ ಮೋದಿ ಅವರಿಗೆ ನೀಡಿದ ಬೆಳ್ಳಿ ಗಣಪತಿ ಸ್ವಂತದ್ದು ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ನೀಡಿದ ಗಣೇಶನನ್ನು ಬಿಜೆಪಿಯವರೊಬ್ಬರು ತಂದಿದ್ದು ಎಂಬ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ವಿಷಯಕ್ಕೆ ಡಿಕೆಶಿ ಸ್ಪಷ್ಟನೆ ನೀಡಿರುವುದಾಗಿದೆ.
ಆ ಪ್ರತಿಮೆಯನ್ನು ಖರೀದಿ ಮಾಡಲು ತಾನು ಇಲಾಖೆಯ ಹಣವನ್ನು ಸಹ ಬಳಸಿಲ್ಲ. ಅದನ್ನು ತಮ್ಮ ಸ್ವಂತ ಹಣದಲ್ಲಿ ತಂದಿದ್ದಾಗಿಯೂ, ಅದನ್ನು ಕಚೇರಿ ಸಿಬ್ಬಂದಿ ಎಸ್ಪಿಜಿ ತಪಾಸಣೆ ಮಾಡಿದ ಬಳಿಕ ಪ್ರಧಾನಿ ಅವರಿಗೆ ನೀಡಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.
























