ರೇಣುಕಾಸ್ವಾಮಿ ಹತ್ಯೆ: ದರ್ಶನ್, ಪವಿತ್ರಾ ಸೇರಿದಂತೆ ಇತರ ಆರೋಪಿಗಳು ಕೋರ್ಟ್‌ಗೆ ಹಾಜರು

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿಗಳಾಗ ನಟ ದರ್ಶನ್ ತೂಗುದೀಪ್, ಪವಿತ್ರಾ ಸೇರಿದಂತೆ ಇತರರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಸಿಸಿಎಚ್ 63 ರ ನ್ಯಾಯಾಧೀಶ ಮುಂದೆ ಆರೋಪಿಗಳು ಹಾಜರಾಗಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ. 9 ಕ್ಕೆ ಮುಂದೂಡಿ ಆದೇಶ ಹೊರಡಿಸಲಾಗಿದೆ.

ದರ್ಶನ್ ಮತ್ತು ಪವಿತ್ರಾ ಇಬ್ಬರೂ ಕೋರ್ಟ್ ಆವರಣದಲ್ಲೇ ಇದ್ದರೂ ಪರಸ್ಪರ ಮಾತನಾಡಿಲ್ಲ ಎಂದು ತಿಳಿದು ಬಂದಿದೆ.





















































 
 

ದರ್ಶನ್, ಪವಿತ್ರಾ ಸೇರಿದಂತೆ ಇತರ ಆರೋಪಿಗಳಿಗೆ ನೀಡಿದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಸಲಾಗಿದೆ. ಆದರೆ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ.

error: Content is protected !!
Scroll to Top