ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳು ದೂರುದಾರ ಮಾಸ್ಕ್‌ಮ್ಯಾನ್ ಗುರುತಿಸಿದ 13 ನೇ ಸ್ಥಳದಲ್ಲಿ ಕಾರ್ಯಾಚರಣೆ ಆರಂಭ ಮಾಡಿದೆ.
ಜಿಪಿಆರ್ ಸಿಗ್ನಲ್ ಸ್ಪಷ್ಚವಿಲ್ಲದಿದ್ದರೂ ಅನಾಮಿಕ ದೂರುದಾರನ ಸೂಚನೆಯಂತೆ ಈ ಸ್ಥಳದಲ್ಲಿ ಶವದ ಕಳೇಬರದ ಹುಡುಕಾಟ ನಡೆಸಲಾಗುತ್ತಿದೆ. ಧರ್ಮಸ್ಥಳ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಸಮೀಪ ಈ ಕಾರ್ಯಾಚರಣೆ ನಡೆಸಲಾಗಿದೆ.
ಎಸಿ ಸ್ಟೆಲ್ಲಾ ವರ್ಗೀಸ್, SIT ಅಧಿಕಾರಿಗಳು ಸ್ಥಳದಲ್ಲಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ.
























