ಪದ್ಮಲತಾ ಪ್ರಕರಣ: ಮರುತನಿಖೆಗೆ ದೂರು ಸಲ್ಲಿಸಲು SIT ಕಚೇರಿಗೆ ಆಗಮಿಸಿದ ಸಹೋದರಿ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ದಶಕಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ‌ಪದ್ಮಲತಾ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಕೋರಿ ಪದ್ಮಲತಾ ಸಹೋದರಿ SIT ಕಚೇರಿಗೆ ಆಗಮಿಸಿ, ದೂರು ಸಲ್ಲಿಸಲು ಮುಂದಾಗಿದ್ದಾರೆ.

ಕಳೆದ 38 ವರ್ಷಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಆ ಸಂದರ್ಭದಲ್ಲಿ ತನಿಖೆ ಮಾಡಲಾಗಿದ್ದರೂ ಯಾವುದೇ ಪ್ರಮುಖ ಸಾಕ್ಷ್ಯ ದೊರೆಯದ ಹಿನ್ನೆಲೆ ಕೇಸ್ ಮುಚ್ಚಿ ಹೋಗಿತ್ತು. ಆ ಸಂದರ್ಭದಲ್ಲಿ ಪದ್ಮಲತಾ ಶವವನ್ನು ದಫನ ಮಾಡಲಾಗಿತ್ತು.

CPIM ನಾಯಕ ಬಿ.ಎಂ. ಭಟ್ ಮತ್ತು ಇತರರ ಜೊತೆಗೆ ಪದ್ಮಲತಾ ಸಹೋದರಿ ಇಂದ್ರಾವತಿ ಅವರು SIT ಕಚೇರಿಗೆ ಆಗಮಿಸಿರುವುದಾಗಿದೆ.





















































 
 

ಆದರೆ ಕೆಲವು ಅಧಿಕಾರಿಗಳು ಸ್ಥಳದಲ್ಲಿ ಇರದ ಕಾರಣದಿಂದ ಇಂದ್ರಾವತಿ ಅವರನ್ನು ಮತ್ತೆ ಬರುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top