ಕೋಮುಸೌಹಾರ್ಧತೆಗೆ ಭಂಗ ತರುವ ಪೋಸ್ಟ್: ಪೇಸ್ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಕೋಮು ಸೌಹಾರ್ದತೆ ಕದಡುವಂತಹ ಸುಳ್ಳು ಸುದ್ದಿಗಳನ್ನು ಪೋಸ್ಟ್ ಹಾಕಿದ ಫೇಸ್‌ಬುಕ್ ಪೇಜ್ ‘ಭಾರತೀಯ ಸೇನೆ’ ಯ ನಿರ್ವಾಹಕರ ಮೇಲೆ ಸ್ವಯಂಪ್ರೇರಿತವಾಗಿ ‌ಪುತ್ತೂರು ನಗರ ಠಾಣೆಯ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.

ಅಪರಾಧ ಸಂಖ್ಯೆ 70/2025 ರ ಅಡಿಯಲ್ಲಿ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 196(1)(ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 353(2) (ಸಾರ್ವಜನಿಕ ಶಾಂತಿ ಕದಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

error: Content is protected !!
Scroll to Top