ಯುನಿಸೆಕ್ಸ್ ‌ಸಲೂನ್ ಮಾಲಕರಿಂದ ಹಲ್ಲೆ, ಅರೆಬೆತ್ತಲೆ ಫೋಟೋ ತೆಗೆದು ಹಿಂಸೆ: ದೂರು ದಾಖಲಿಸಿದ ಸಂತ್ರಸ್ತೆ

ಮಂಗಳೂರು: ಹಂಪನಕಟ್ಟೆಯ ಯೂನಿಸೆಕ್ಸ್ ಸಲೂನ್ ಒಂದರ ಮಾಲಕಿ ಅದೇ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್ ಒಬ್ಬರನ್ನು ಬೆದರಿಸಿ, ಅರೆ ಬೆತ್ತಲೆ ಫೋಟೋ ತೆಗೆಸಿ ಚಿತ್ರಹಿಂಸೆ ನೀಡಿದ್ದಾಗಿ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಸುಮಾರು ಒಂದೂವರೆ ತಿಂಗಳ ಹಿಂದೆ ಮಹಿಳೆ ಆ ಪಾರ್ಲರ್‌ನಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿಗೆ ಬರುವ ಗ್ರಾಹಕರ ಜೊತೆಗೆ ಸಲುಗೆಯಿಂದ ‌ವರ್ತಿಸಿ ಅವರಿಂದ 500, 1000 ರೂ. ಪಡೆಯುವಂತೆ ತಿಳಿಸಿದ್ದರು.

ಅಂತೆಯೇ ಅಲ್ಲಿಗೆ ಮಾಲಕರ ಪರಿಚಯದ ವ್ಯಕ್ತಿಯೊಬ್ಬ ಬಂದು ಮಸಾಜ್ ಮಾಡಿಸಿಕೊಂಡಿದ್ದು ಮಾತ್ರವಲ್ಲದೆ ಮಾತವಾಡಿರುವುದನ್ನು ರೆಕಾರ್ಡ್ ಮಾಡಿಕೊಂಡು ಮಾಲಕರಿಗೆ ನೀಡಿದ್ದಾರೆ. ಕೊಂಚ ಹೊತ್ತಿನಲ್ಲೇ ಅಲ್ಲಿಗೆ ಬಂದ ಮಾಲಕರು ತನಗೆ ಬೆದರಿಕೆ ಒಡ್ಡಿದ್ದು ಮಾತ್ರವಲ್ಲದೆ, ಅರೆ ಬೆತ್ತಲೆ ಮಾಡಿ ಫೋಟೋ ತೆಗೆದಿದ್ದಾರೆ. ಮರುದಿನ ತನ್ನ ಪತಿಯನ್ನು ಕರೆಸಿ ಅವರಿಗೂ ಆ ಚಿತ್ರ ತೋರಿಸಿ ಮಾನಸಿಕ ಹಿಂಸೆ ಮಾಡಿದ್ದಾರೆ.





















































 
 

ನನಗೆ ಮೂರು ವರ್ಷದ ಮಗುವಿದೆ. ಈ ಘಟನೆಯಿಂದ ನೊಂದ ನಾನು ಆತ್ಮಹತ್ಯೆಯ ಯೋಚನೆ ಮಾಡಿದ್ದೆ. ಬಳಿಕ ಈ ವಿಚಾರವನ್ನು ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರ ಗಮನಕ್ಕೆ ತಂದಿದ್ದು, ಅವರ ಸೂಚನೆಯಂತೆ ಬಂದರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಮಾಡಿರುವುದಾಗಿ ಹೇಳಿದ್ದಾರೆ.

ಸಲೂನಿನಲ್ಲಿ ಕಾರ್ಯ ನಿರ್ವಹಿಸುವ ಇತರರ ಮೇಲೂ ಹೀಗೆಯೇ ದೌರ್ಜನ್ಯ ನಡೆಯುತ್ತಿದೆ. ಆದರೆ ಉದ್ಯೋಗ ಮತ್ತು ಮರ್ಯಾದೆ ಕಳೆದುಕೊಳ್ಳಬೇಕಾಗಿ ಬರುವ ಕಾರಣಕ್ಕೆ ಸುಮ್ಮನಿದ್ದಾರೆ. ನಾನು ಮಾನಸಿಕವಾಗಿ ನೊಂದಿದ್ದು, ನನ್ನ ಸ್ಥಿತಿ ಯಾರಿಗೂ ಬರಬಾರದು ಎಂದು ನುಡಿದಿದ್ದಾರೆ.

error: Content is protected !!
Scroll to Top