ರಕ್ಷಾ ಬಂಧನ: ದೇಶವಾಸಿಗಳಿಗೆ ಶುಭ ಕೋರಿದ ‌ಪ್ರಧಾನಿ ಮೋದಿ, ಅಮಿತ್ ಶಾ

ನವದೆಹಲಿ: ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿ ಪೋಸ್ಟ್ ಮಾಡಿರುವ ಅವರು, ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಬಲಪಡಿಸುವಲ್ಲಿ ‌ಮಹತ್ವ ಪಡೆದಿದೆ ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹ ಹಬ್ಬದ ಹಿನ್ನೆಲೆ ದೇಶದ ಜನರಿಗೆ ಶುಭಾಶಯಗಳನ್ನು ಕೋರಿದ್ದು, ಸಹೋದರ ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಬದ್ಧತೆಗೆ ಪವಿತ್ರವಾದ ದಿನ. ಈ ಸಂದರ್ಭದಲ್ಲಿ ಎಲ್ಲರ ಬದುಕು ಸಂತೋಷ, ಉತ್ಸಾಹದ ಮೂಲವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ನುಡಿದಿದ್ದಾರೆ.





















































 
 
error: Content is protected !!
Scroll to Top