ಬಾಗಲಕೋಟೆ: ಜೊತೆಯಲ್ಲಿ ಓದುವ ವಿದ್ಯಾರ್ಥಿಗಳ ರ್ಯಾಗಿಂಗ್‌ಗೆ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಗುಳೇದಗುಡ್ಡದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಅಂತಿಮ ಬಿ.ಎ. ವಿದ್ಯಾರ್ಥಿನಿ ಅಂಜಲಿ ಮುಂಡಾಲಸ(21) ಎಂದು ಗುರುತಿಸಲಾಗಿದೆ.
ಅಂಜಲಿಗೆ ಶುಕ್ರವಾರ ಸಹಪಾಠಿಗಳು ರ್ಯಾಗಿಂಗ್ ಮಾಡಿದ್ದರು. ಈ ವಿಷಯದಿಂದ ಅಂಜಲಿ ಬಹಳಷ್ಟು ನೊಂದಿದ್ದರು. ಮಾನಸಿಕ ಕಿರುಕುಳ ಅನುಭವಿಲಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಗುಳೇದಗುಡ್ಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
























