ನವದೆಹಲಿ: ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ನವದೆಹಲಿಯ ಅವರ ನಿವಾಸದಲ್ಲಿ ಮಕ್ಕಳು, ಮಹಿಳೆಯರು ರಕ್ಷೆ ಕಟ್ಟಿ ಸಂಭ್ರಮಿಸಿದರು.
ಪ್ರಧಾನಿ ಅವರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಸಂಘಟನೆಯ ಸಹೋದರಿಯರು ರಕ್ಷೆ ಕಟ್ಟಿದರು. ಹಾಗೆಯೇ ಪ್ರಧಾನಿ ಮೋದಿ ಅವರ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರು, ಹಾಗೂ ಇತರ ಸಿಬ್ಬಂದಿಯ ಹೆಣ್ಣು ಮಕ್ಕಳು ರಕ್ಷೆ ಕಟ್ಟಿ ರಕ್ಷಾ ಬಂಧನ ಆಚರಿಸಿಕೊಂಡಿದ್ದಾರೆ.
ಹಾಗೆಯೇ ಶಾಲಾ ಮಕ್ಕಳು ಸಾಮೂಹಿಕವಾಗಿ ಪ್ರಧಾನಿ ಮೋದಿ ಅವರಿಗೆ ರಕ್ಷೆ ಕಟ್ಟಿ ರಕ್ಷಾ ಬಂಧನ ಆಚರಣೆಯನ್ನು ಸಂಭ್ರಮಿಸಿದರು.
























