ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಫಿಲೋ ಪ್ರತಿಭಾ ಪ್ರಶಸ್ತಿ

ಪುತ್ತೂರು: ಸೈಂಟ್ ಫಿಲೋಮಿನಾ ಪದವಿಪೂರ್ವ ಕಾಲೇಜು ನಡೆಸಿದ ’ಫಿಲೋ ಪ್ರತಿಭಾ’ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಶಸ್ತಿ ಗಳಿಸಿದೆ.

ಶಾಲಾ ವಿದ್ಯಾರ್ಥಿಗಳಾದ ಕುಶಿತಾ ಮತ್ತು ಶ್ರೇಯಾ ರಂಗೋಲಿಯಲ್ಲಿ ಪ್ರಥಮ, ಸಾಯೀಶ್ವರಿ ಮತ್ತು ದೀಕ್ಷಾ ಎಂ. ಮುಖವರ್ಣಿಕೆಯಲ್ಲಿ ದ್ವಿತೀಯ ಹಾಗೂ ಅದ್ವಿಜ್ ಜಿ. ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.





















































 
 

error: Content is protected !!
Scroll to Top