10*15 ಅಡಿ ದೊಡ್ಡ ಮನೆಯಲ್ಲಿ 80 ಜನ ವಾಸ ಮಾಡುವುದು ಸಾಧ್ಯವೆ? : ಕಾಂಗ್ರೆಸ್‌ಗೆ ಮನೆ ಮಾಲೀಕನ ಪ್ರಶ್ನೆ

ಮೂವರು ವಾಸವಿರುವ ಮನೆಯಲ್ಲಿ 80 ಜನ ಮತದಾರರು ಇದ್ದಾರೆ ಎಂದು ಹೇಳಿದ್ದ ರಾಹುಲ್‌ ಗಾಂಧಿಗೆ ತಿರುಗೇಟು

ಬೆಂಗಳೂರು: ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆ ವೇಳೆ ಮತ ಕಳ್ಳತನವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೇಲೆ ಬಿಜೆಪಿ ಮುಗಿಬಿದ್ದಿರುವಂತೆಯೇ ಮನೆ ಮಾಲೀಕರೊಬ್ಬರು 10*15 ಅಡಿ ದೊಡ್ಡದಿರುವ ಮನೆಯಲ್ಲಿ 80 ಮಂದಿ ವಾಸ ಮಾಡಲು ಸಾಧ್ಯವೇ ಎಂಬ ಪ್ರಾಕ್ಟಿಕಲ್‌ ಪ್ರಶ್ನೆಯನ್ನು ಕೇಳಿದ್ದಾರೆ.

ಬೆಳ್ಳಂದೂರಿನ ಮನೆ ನಂ.35ರ ವಿಳಾಸದಲ್ಲಿ 80 ಮಂದಿಗೆ ವೋಟರ್‌ ಐಡಿ ಕಾರ್ಡ್‌ ನೀಡಲಾಗಿದೆ ಎಂದು ರಾಹುಲ್‌ ಗಾಂಧಿ ನಿನ್ನೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮನೆ ಮಾಲೀಕ ಪ್ರತಿಕ್ರಿಯಿಸಿದ್ದು, 10*15 ಅಡಿಯಲ್ಲಿ ಎಷ್ಟು ಜನ ಇರೋಕಾಗುತ್ತೆ ಎಂದು ಪ್ರಶ್ನಿಸಿ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ.





















































 
 

ಕೆಲವು ಮಾಧ್ಯಮಗಳು ಕೂಡ ನಿನ್ನೆಯೇ ಈ ಮನೆಗೆ ಹೋಗಿ ರಿಯಾಲಿಟಿ ಚೆಕ್‌ ಮಾಡಿದ್ದು, ಆಗ ಮನೆಯಲ್ಲಿ ಕೇವಲ ಮೂರು ಮಂದಿ ಮಾತ್ರ ಇರುವುದು ಪತ್ತೆಯಾಗಿದೆ.

ನಾನು ಬಿಜೆಪಿ ಕಾರ್ಯಕರ್ತನಲ್ಲ. ನನ್ನ ಮಕ್ಕಳಿಗೂ ಇಂಥದ್ದೇ ಪಕ್ಷಕ್ಕೆ ವೋಟ್ ಹಾಕಿ ಎಂದು ಹೇಳಿಲ್ಲ. ಯಾರಾದರೂ ಬಂದು ಪರಿಶೀಲನೆ ಮಾಡಲಿ. ಮುನಿರೆಡ್ಡಿ ಗಾರ್ಡನ್‍ನ ಮನೆ ನಂಬರ್ 35 ನನ್ನದೇ. ಕಳೆದ 15 ವರ್ಷಗಳಿಂದ ಬಾಡಿಗೆಗೆ ಕೊಡುತ್ತಿದ್ದೇನೆ. ಎಲ್ಲರೂ ಹಿಂದಿ ಹುಡುಗರು. ಮೂರು ಜನರ ಮೇಲೆ ನಾನು ಬಾಡಿಗೆಗೆ ಕೊಡಲ್ಲ. 10*15ನ ರೂಮನ್ನು 80 ಜನಕ್ಕೆ ಬಾಡಿಗೆಗೆ ಕೊಡೋಕೆ ಆಗುತ್ತಾ? ಕಾಂಗ್ರೆಸ್ ನಾಯಕರು ಮಾಡಿರುವ ಆರೋಪ ಸುಳ್ಳು. ಅಲ್ಲಿ ಅಷ್ಟು ಜನ ವಾಸ ಮಾಡೋಕೆ ಆಗಲ್ಲ ಎಂದು ಮನೆ ಮಾಲೀಕ ಜಯರಾಮ್ ರೆಡ್ಡಿ ಹೇಳಿದ್ದಾರೆ.

ಬಾಡಿಗೆಗೆ ಇದ್ದವರು ಕೋವಿಡ್ ವೇಳೆ ಎಲ್ಲರೂ ಅವರವರ ಊರಿಗೆ ಹೋದರು. ಅಲ್ಲಿ ಈಗ ಮತ ಚಲಾಯಿಸುವವರು ಮೂವರು ಇದ್ದಾರೆ. 80 ಜನ ಎಲ್ಲಿಂದ ಬಂದಿದ್ದಾರೆ? 80 ಮಂದಿಗೆ ನಾವು ಮನೆ ಕೊಡೋಕೆ ಆಗುತ್ತಾ? ಗಾರ್ಡನ್ ಕೆಲಸ, ಸೆಕ್ಯೂರಿಟಿ ಕೆಲಸ ಎಂದು ಬಾಡಿಗೆ ಎಂದಿದ್ದಾರೆ.

error: Content is protected !!
Scroll to Top