ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ‘ಡಿಕ್ಷನ್’ ಲೋಕಾರ್ಪಣೆ

ಪುತ್ತೂರು: ಶಾಲಾ ಮಕ್ಕಳ ಪ್ರತಿಭಾ ದರ್ಪಣವಾದ ಭಿತ್ತಿಪತ್ರ ‘ಡಿಕ್ಷನ್’ಇದನ್ನು ಪುತ್ತೂರಿನ ಹಿರಿಯ ಪತ್ರಕರ್ತ ಲೋಕೇಶ್ ಬನ್ನೂರು ಅವರು ಲೋಕಾರ್ಪಣೆಗೊಳಿಸಿದರು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳು ಗೋಡೆಯಲ್ಲಿ ಗೀಚಿದ್ದಕ್ಕೆ ಅವರಿಗೆ ಗದರಿಸಬಾರದು, ಬದಲಾಗಿ ಗೀಚುವಿಕೆಯನ್ನು ಪುಸ್ತಕಕ್ಕೆ ವರ್ಗಾಯಿಸಬೇಕು ಎಂದರು. ಇದು ಪೋಷಕರ ಜವಾಬ್ದಾರಿಯಾಗಬೇಕು ಎಂದು ಕಿವಿಮಾತು ಹೇಳಿದರು.

‘ಡಿಕ್ಷನ್’ ಎಂಬ ಹೆಸರು ಸೂಚಿಸಿದ ಶಾಲಾಡಳಿತ ಮಂಡಳಿಯ ನಿರ್ದೇಶಕ ಸೀತಾರಾಮ ಕೇವಳ ಅವರು ಮಾತನಾಡಿ ಸರಳ ಬರವಣಿಗೆಯ ಕುರಿತು ಮಕ್ಕಳಿಗೆ ಸಲಹೆ ನೀಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಶಾಲಾಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಅವರು ಮಾತನಾಡಿ ತೋಚಿದ್ದನ್ನು ಗೀಚುವುದು ಒಳ್ಳೆಯದು. ಅದಕ್ಕೆ ಅವಕಾಶ ಕಲ್ಪಿಸುವ’ಡಿಕ್ಷನ್’ನ್ನು ರೂಪಿಸಿದ ಶಿಕ್ಷಕ ಬಳಗಕ್ಕೆ ಅಭಿನಂದನೆ ಸಲ್ಲಿಸಿದರು.





















































 
 

‘ಡಿಕ್ಷನ್’ನ ಗೌರವ ಸಂಪಾದಕರಾಗಿ ಶಾಲಾ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡ, ಪ್ರಧಾನ ಸಂಪಾದಕರಾಗಿ ಎ ವಿ ನಾರಾಯಣ, ಸಲಹಾ ಸಮಿತಿ ಸದಸ್ಯರಾಗಿ ಗುಡ್ಡಪ್ಪ ಗೌಡ ಬಲ್ಯ, ಸೀತಾರಾಮ ಕೇವಳ , ಅಮರನಾಥ್ ಪಟ್ಟೆ ಮತ್ತು ಶಿಕ್ಷಕಿ ರಾಧಾ, ವಿದ್ಯಾರ್ಥಿ ಸಂಯೋಜಕರಾಗಿ ಅದ್ವಿಕ್ ಬಂಜನ್, ಆದ್ಯ, ಗನ್ವಿತ್, ಅನೂಪ್ ರಾಜ್ ಮತ್ತು ಎ. ಎನ್. ಜ್ಯೋತ್ಸ್ನಾ ಗೌಡ ಕಾರ್ಯ ನಿರ್ವಹಿಸಲಿದ್ದಾರೆ.

ಸಂಚಾಲಕರಾದ ಎ ವಿ ನಾರಾಯಣ, ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷ ಉಮೇಶ್ ಮಳುವೇಲು, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ ಮತ್ತು ಪೋಷಕರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಅಮರನಾಥ್ ಪಟ್ಟೆ ಸ್ವಾಗತ ಮತ್ತು ನಿರೂಪಣೆ ಹಾಗೂ ‘ಡಿಕ್ಷನ್’ನ ಉಸ್ತುವಾರಿ ಶಿಕ್ಷಕಿ ರಾಧಾ ವಂದನಾರ್ಪಣೆಗಳನ್ನು ನೆರವೇರಿಸಿದರು.

error: Content is protected !!
Scroll to Top