ನವದೆಹಲಿ: ಭಾರತದ ಮೇಲೆ ಅಮೆರಿಕಾ ಸುಂಕ ಬೆದರಿಕೆ ಹಾಕಿರುವುದಕ್ಕೆ ಪ್ರತಿಯಾಗಿ ಭಾರತವೂ ಅಮೆರಿಕದ ಸರಕು ಸುಂಕವನ್ನು ಏರಿಕೆ ಮಾಡುವಂತೆ ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನೂ ಶಶಿ ತರೂರ್ ಟೀಕಿಸಿದ್ದು, ಯಾವುದೇ ರಾಷ್ಟ್ರಕ್ಕೂ ಭಾರತವನ್ನು ಬೆದರಿಸಲು ಸಾಧ್ಯವಿಲ್ಲ. ನಾವು ಅಮೆರಿಕಾದ ಸರಕುಗಳ ಮೇಲೆ 50% ಸುಂಕ ಹೇರಿದರೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಅಮೆರಿಕದ ಇಂತಹ ನಿರ್ಧಾರಗಳಿಗೆ ಭಾರತ ಹೆದರಬಾರದು ಎಂದು ಅವರು ಹೇಳಿದ್ದಾರೆ.
ಅಮೆರಿಕಾಕ್ಕೆ ನಮ್ಮ ಜೊತೆ 90 ಶತಕೋಟಿ ಡಾಲರ್ ವ್ಯಾಪಾರ ವ್ಯವಹಾರ ಇದೆ. ನಾವು ಅಮೆರಿಕಾದ ಸರಕುಗಳ ಮೇಲೆ ಸುಂಕ ಹೇರಿದರೆ ಭಾರತೀಯರು ಅದನ್ನು ಖರೀದಿ ಮಾಡಲು ಯೋಚಿಸುತ್ತಾರೆ. ಯಾವ ದೇಶವೂ ಸಹ ಭಾರತವನ್ನು ಬೆದರಿಸಲು ಮುಂದಾಗಬಾರದು ಎಂದು ಅವರು ತಿಳಿಸಿದ್ದಾರೆ.
























