ವಿಶ್ವದ ಆರ್ಥಿಕತೆಗೆ ಅಮೆರಿಕಾಗಿಂತ ಭಾರತದ ಕೊಡುಗೆ ಹೆಚ್ಚು: RBI ಗವರ್ನರ್ ಹೇಳಿಕೆ

ನವದೆಹಲಿ: ವಿಶ್ವದ ಆರ್ಥಿಕತೆಗೆ ಅಮೆರಿಕಾಕ್ಕಿಂತ ಹೆಚ್ಚಿನ ಕೊಡುಗೆ ಭಾರತ ನೀಡುತ್ತಿದೆ ಎಂದು RBI ಗವರ್ನರ್ ಸಂಜಯ್ ಮಲ್ಹೋತ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ್ದು ‌ಸತ್ತ ಆರ್ಥಿಕತೆ ಎಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಭಾರತದ ಆರ್ಥಿಕತೆ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಸುಧಾರಣೆ ಕಾಣಲಿದೆ. ಜಗತ್ತಿನ ಆರ್ಥಿಕತೆಗೆ ಭಾರತ 18% ಕೊಡುಗೆ ನೀಡುತ್ತಿದ್ದರೆ, ಅಮೆರಿಕಾ ಕೇವಲ 11% ಮಾತ್ರವೇ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಭಾರತದ ಆರ್ಥಿಕ ಅಭಿವೃದ್ಧಿಯ ದರ ಹಲವು ಬಾರಿ ನಮ್ಮ ಅಂದಾಜಿಗಿಂತ ಹೆಚ್ಚೇ ಆಗಿರುತ್ತದೆ. ಭಾರತದ ಜಿಡಿಪಿ ದರ ಪ್ರಸಕ್ತ ವರ್ಷದಲ್ಲಿ 6.5% ಇರಲಿದೆ. ಇದು ಐಎಂಎಫ್ ಜಾಗತಿಕ ಬೆಳವಣಿಗೆಯ ಕುರಿತಾಗಿ ಅಂದಾಜು ಮಾಡಿರುವ ದರಕ್ಕಿಂತಲೂ ಅಧಿಕ. ಭಾರತದ ಹಣದುಬ್ಬರ ಸಹ ಸ್ಥಿರವಾಗಿರಲಿದೆ.‌ ಅಮೆರಿಕಾದ ಸುಂಕ ಭೀತಿ ಇದರ ಮೇಲೆ ಯಾವ‌ ಪರಿಣಾಮವನ್ನೂ ಬೀರುವುದಿಲ್ಲ ಎಂದು ಅವರು ನುಡಿದಿದ್ದಾರೆ.





















































 
 
error: Content is protected !!
Scroll to Top