ಆಪರೇಷನ್ ಸಿಂಧೂರ್ ಹೆಸರಲ್ಲಿ ಸೀರೆ ನೇಯ್ದ ನೇಕಾರ

ಗದಗ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಗದಗಿನ ನೇಕಾರೊಬ್ಬರು ‌ವಿಶೇಷ ರೀತಿಯಲ್ಲಿ‌ ಗೌರವ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗದಗಿನ ನೇಕಾರರೊಬ್ಬರು ಕೈಮಗ್ಗದ ಸೀರೆಯಲ್ಲಿ ಆಪರೇಷನ್ ಸಿಂಧೂರ್ ಎಂದು ಬರೆಯುವ ಮೂಲಕ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಸೀರೆಯ ಬಾರ್ಡರ್‌ನಲ್ಲಿ ಭಾರತದ ತ್ರಿವರ್ಣ ಧ್ವಜದ ಬಣ್ಣದಲ್ಲಿ ಮೂರು ಯುದ್ಧ ವಿಮಾನಗಳನ್ನು ಚಿತ್ರಿಸಲಾಗಿದೆ.

ಶುದ್ಧ ಹತ್ತಿಯಿಂದ ಮತ್ತು ರೇಷ್ಮೆ ಬಾರ್ಡರ್‌ನೊಂದಿಗೆ ಈ ಸೀರೆಯನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಗಜೇಂದ್ರಘಡದ ಶುದ್ಧ ಹತ್ತಿ ಬಳಕೆ ಮಾಡಿ ತಯಾರಿಸುವ ಪಟ್ಟೇದಂಚಿನ ಸೀರೆಗಳ ಸಾಲಿಗೆ ಈ ಸೀರೆಯೂ ‌ಸೇರಿದೆ.





















































 
 
error: Content is protected !!
Scroll to Top