ಧರ್ಮಸ್ಥಳ: ನಿನ್ನೆಯಷ್ಟೇ ಧರ್ಮಸ್ಥಳದಲ್ಲಿ ಗಲಭೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಅ.7 ರಂದು ಅಧಿಕಾರಿಗಳು ಯಾವುದೇ ರೀತಿಯ ಕಾರ್ಯಾಚರಣೆ ನಡೆಸದೆ ತಟಸ್ಥ ನಿಲುವು ತಾಳಿದರು.
ಅನಾಮಿಕ ದೂರುದಾರ ಗುರುತಿಸಲಾದ 13 ನೇ ಸ್ಥಳದಲ್ಲಿ ಇಂದು ಕಾರ್ಯಾಚರಣೆ ನಡೆಯಬೇಕಾಗಿತ್ತು. ಆದರೆ ನಿನ್ನೆ ರಾತ್ರಿ ಕಾರ್ಯಾಚರಣಾ ಸ್ಥಳದ ಸಮೀಪ ಉಂಟಾದ ಉದ್ವಿಗ್ನ ಪರಿಸ್ಥಿತಿ ಕಾರಣಕ್ಕೆ ಈ ದಿನ ಕಾರ್ಯಾಚರಣೆ ತಟಸ್ಥವಾಗಿತ್ತು. ಅದರ ಬದಲಾಗಿ ಅಧಿಕಾರಿಗಳು ತಮ್ಮ ಕಚೇರಿಯಲ್ಲೇ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
SIT ಮುಖ್ಯಸ್ಥ ಡಾ. ಪ್ರಣಬ್ ಮೊಹಂತಿ ಸೇರಿದಂತೆ ಇತರ ಅಧಿಕಾರಿಗಳು, ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರೊಂದಿಗೆ ಕಚೇರಿಯಲ್ಲಿ ಕಡತ ಪರಿಶೀಲಿಸಿ ತೆರಳಿದ್ದಾರೆ. ಹಾಗೆಯೇ ಅನಾಮಿಕ ದೂರುದಾರ ಸಹ ಕಚೇರಿಗೆ ಬಂದಿದ್ದು, ಆ ಬಳಿಕ ತನ್ನ ವಕೀಲರ ಜೊತೆಗೆ ಹಿಂದಿರುಗಿದ್ದಾಗಿ ತಿಳಿದು ಬಂದಿದೆ.
























