ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್, ಪವಿತ್ರಾ ಸೇರಿದಂತೆ ಇನ್ನುಳಿದ ಆರೋಪಿಗಳ ಜಾಮೀನು ರದ್ದಾಗುವ ಭೀತಿ ಎದುರಾಗಿದೆ.
ಈ ಸಂಬಂಧ ಪ್ರಮುಖ ಆರೋಪಿ ಪವಿತ್ರಾ ಅವರು ಸುಪ್ರೀಂ ಕೋರ್ಟ್‌ಗೆ ತಮ್ಮ ವಕೀಲರ ಮೂಲಕ ವರದಿ ಸಲ್ಲಿಸಿದ್ದು, ರೇಣುಕಾಸ್ವಾಮಿ ಹತ್ಯೆಗೂ ತಮಗೂ ಸಂಬಂಧ ಇಲ್ಲ. ಆತನ ಮೃತ ದೇಹದ ಮೇಲಿದ್ದ ಗಾಯಗಳು ಪವಿತ್ರಾರಿಂದ ಆಗಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೆ ತಾವೊಬ್ಬ ಪೋಷಕಿಯಾಗಿದ್ದು, ಹತ್ತನೇ ತರಗತಿ ಓದುತ್ತಿರುವ ಮಗಳಿದ್ದಾಳೆ. ವಯಸ್ಸಾದ ಪೋಷಕರೂ ಇದ್ದು, ಅವರನ್ನೂ ನೋಡಿಕೊಳ್ಳಬೇಕಾದ ಜವಾಬ್ದಾರಿ ಇದೆ. ತಮಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಪೊಲೀಸರು ಸಹ ತಮ್ಮ ಬಂಧನಕ್ಕೆ ಲಿಖಿತ ಕಾರಣಗಳನ್ನು ನೀಡಿಲ್ಲ. ತಾವು ಮಹಿಳೆ ಆಗಿರುವ ಕಾರಣ ಜಾಮೀನು ರದ್ದು ಕಠಿಣ ಕ್ರಮವಾಗುತ್ತದೆ ಎಂದು ಮನವಿ ಸಲ್ಲಿಸಿರುವುದಾಗಿದೆ.
























