ಫ್ಲವರ್ ಶೋ‌ಗೆ ಲಾಲ್‌ಬಾಗ್ ಸಿದ್ಧ: ಈ ಬಾರಿಯ ವಿಶೇಷತೆ ಏನು ಗೊತ್ತಾ?

ಬೆಂಗಳೂರು: ಸ್ವಾತಂತ್ರ್ಯ ದಿನಕ್ಕೆ ನಗರದ ಲಾಲ್‌ಭಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಪ್ರದರ್ಶನ ಇದಾಗಿರಲಿದೆ.

ಆ. 7 ರಿಂದ ಆ. 18 ರ ವರೆಗೆ ಒಟ್ಟು 12 ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಿಎಂ ‌ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ‌.

ಗಾಜಿನ ಮನೆಯ ಪ್ರಮುಖ ಆಕರ್ಷಣೆಯಾಗಿ ಕಿತ್ತೂರಿನ ಬೃಹತ್ ಹೂವಿನ ಕೋಟೆಯಾಗಿರಲಿದೆ. ಇದನ್ನು ಗುಲಾಬಿ ಮತ್ತು ಸೇವಂತಿಗೆ ಹೂವುಗಳಿಂದ ಸಿಂಗಾರ ಮಾಡಲಾಗುವುದಾಗಿ ‌ಮೂಲಗಳು ಹೇಳಿವೆ. ಹಾಗೆಯೇ ರಾಣಿ ಚೆನ್ನಮ್ಮ ಕುದುರೆಯ ಮೇಲೆ ಕುಳಿತಿರುವ ಮತ್ತು ಖಡ್ಗ ಹಿಡಿದು ನಿಂತಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಕಂಗೊಳಿಸಲಿದೆ. ಹಾಗೆಯೇ ಕಿತ್ತೂರು ರಾಣಿ ಚೆನ್ನಮ್ಮನ ಸಮಾಧಿ ಸ್ಥಳವನ್ನು ಸಹ ಇಲ್ಲಿ ಮರು ಸೃಷ್ಟಿ ಮಾಡಲಾಗುತ್ತದೆ.





















































 
 

ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಫಲ ಪುಷ್ಪಗಳ ಪ್ರದರ್ಶನ ನಡೆಯಲಿದೆ.

error: Content is protected !!
Scroll to Top