ಬ್ರಹ್ಮಾವರ: ಬೈಕಿನ ಸೈಟ್ ಬಾಕ್ಸ್‌ನಿಂದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಂತರ್ ರಾಜ್ಯ ಕಳವು ಆರೋಪಿಯನ್ನು ಬ್ರಹ್ಮಾವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಂತೋಷ ಹನುಮಂತ ಕಟ್ಟಿಮನಿ (39) ಎಂದು ಗುರುತಿಸಲಾಗಿದೆ.
ಈತನಿಂದ ಕಳವು ಮಾಡಿದ 32,000ರೂ. ನಗದು ಹಾಗೂ ಮೊಬೈಲ್ ಫೋನ್ ವಶಪಡಿಸಕೊಳ್ಳಲಾಗಿದೆ.
ಸೊಸೈಟಿಯೊಂದರ ಪಿಗ್ಮಿ ಸಂಗ್ರಹಕ ಅ.4ರಂದು ಸಂಜೆ ಬ್ರಹ್ಮಾವರ ಶಿವಳ್ಳಿ ಹೋಬೆಲ್ ಎದುರುಗಡೆ ಕರ್ನಾಟಕ ಬ್ಯಾಂಕ್ ಎಟಿಎಮ್ ಬಳಿ ಪಿಗ್ಮಿ ಕಲೆಕ್ಷನ್ ಮಾಡಿದ ನಗದನ್ನು ಬೈಕ್‌ನ ಸೈಡ್ ಬಾಕ್ಸ್ನಲ್ಲಿ ಇಟ್ಟು ಬೀಗ ಹಾಕಿ ಹೋಗಿದ್ದು, ಈ ಸಮಯದಲ್ಲಿ ಕಳ್ಳ ತನ್ನ ಕೈಚಳಕ ತೋರಿದ್ದ.
























