ನವದೆಹಲಿ: ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾಗೆ ಭೇಟಿ ನೀಡಿದ್ದು, ಅಮೆರಿಕಾ ಜೊತೆ ಭಾರತದ ವ್ಯಾಪಾರ ಸಂಬಂಧ ಬಿಗಡಾಯಿಸಿರುವ ನಡುವೆಯೇ ದೋವಲ್ ರಷ್ಯಾ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
TASS ವರದಿಯ ಪ್ರಕಾರ ಈ ಭೇಟಿ ಯೋಜಿತ ವೇಳಾಪಟ್ಟಿಯ ಭಾಗವಾಗಿದೆ. ಉಭಯ ರಾಷ್ಟ್ರಗಳ ರಕ್ಷಣಾ ಸಹಕಾರದ ಮೇಲೆ ಕೇಂದ್ರೀಕೃತವಾಗಿದೆ. ಪ್ರಸ್ತುತ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳ ಚರ್ಚೆ, ರಷ್ಯಾದಿಂದ ಭಾರತಕ್ಕೆ ತೈಲ ಪೂರೈಕೆಗೆ ಸಂಬಂಧಿಸಿದ ಹಾಗೆ ಕೆಲ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದ ಹಾಗೆ ತಟಸ್ಥ ನಿಲುವು ಕಾಯ್ದುಕೊಂಡ ಭಾರತ ರಷ್ಯಾ ಜೊತೆಗೆ ತೈಲ ಖರೀದಿ ಮುಂದುವರೆಸಿದೆ. ಈ ಕಾರಣಕ್ಕೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತಕ್ಕೆ ವ್ಯಾಪಾರ ಸುಂಕ ಹೆಚ್ಚಿಸುವ ಬೆದರಿಕೆ ಒಡ್ಡಿದ್ದರು.
























