ಧರ್ಮಸ್ಥಳ ಪ್ರಕರಣ : ಇಂದು 11ನೇ ಪಾಯಿಂಟ್‌ನಲ್ಲಿ ನೆಲ ಅಗೆಯುವ ಕಾರ್ಯಾಚರಣೆ

ಗುರುತಿಸಿದ ಎಲ್ಲ ಸ್ಥಳಗಳಲ್ಲಿ ಅಗೆಯಲು ತೀರ್ಮಾನ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೆಲ ಅಗೆಯುವ ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ದೂರುದಾರ ಈ ಹಿಂದೆ ಗುರುತಿಸಿದ್ದ 11ನೇ ಪಾಯಿಂಟ್‌ನಲ್ಲಿ ಎಸ್ಐಟಿ ಇಂದು ಶೋಧ ಕಾರ್ಯಾಚರಣೆ ಆರಂಭಿಸಿದೆ.

ಸೋಮವಾರದ ಕಾರ್ಯಾಚರಣೆಯ ವೇಳೆ ದೂರುದಾರ ಈ ಹಿಂದೆ ತೋರಿಸಿದ್ದ 11ನೇ ಜಾಗಕ್ಕಿಂತ ಮುಂದಕ್ಕೆ ಕಾಡಿನೊಳಗೆ ಎಸ್ಐಟಿ ಅಧಿಕಾರಿಗಳನ್ನು ಕರೆದೊಯ್ದಿದ್ದು, ಅಲ್ಲಿ ನೆಲದ ಮೇಲೆಯೇ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಅವುಗಳನ್ನು ತಜ್ಞರ ತಂಡ ವೈಜ್ಞಾನಿಕವಾಗಿ ಸಂಗ್ರಹ ಮಾಡಿದೆ.





















































 
 

ಸಾಕ್ಷಿ ದೂರುದಾರು ಈ ಹಿಂದೆ ಗುರುತಿಸಿದ್ದ 11ನೇ ಸ್ಥಳದಲ್ಲಿ ಇಂದು ಅಗೆಯುವ ಕಾರ್ಯ ಆರಂಭಿಸಲಾಗಿದೆ. ಇನ್ನೂ ಹಲವಡೆ ಮೃತದೇಹ ಹೂತಿರುವುದಾಗಿ ದೂರುದಾರ ಹೇಳಿರುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಎಸ್ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಸ್ಪಿ ದರ್ಜೆಯ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಸಹಿತ ಎಸ್ಐಟಿ ಅಧಿಕಾರಿಗಳ ಎಸ್ಐಟಿ ಅಧಿಕಾರಿಗಳ ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರಿನ ಕೆಎಂಸಿ ವೈದ್ಯರ ತಂಡ, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಬದಿಯಲ್ಲಿ ಸಾಕ್ಷಿ ದೂರುದಾರ ಒಟ್ಟು 13 ಜಾಗಗಳನ್ನು ತೋರಿಸಿ, ಅಲ್ಲಿ ಮೃತದೇಹಗಳನ್ನು ಹೂತಿದ್ದೆ ಎಂದು ಎಸ್ಐಟಿಗೆ ತಿಳಿಸಿದ್ದ. ಅದರಂತೆ ಆತ ತೋರಿಸಿದ್ದ ಜಾಗಗಳಲ್ಲಿ ಜು.29ರಿಂದ ಅಗೆಯುವ ಕಾರ್ಯವನ್ನು ಎಸ್ಐಟಿ ಆರಂಭಿಸಿದೆ. ಮೂರನೇ ದಿನದ ಅಗೆಯುವಿಕೆಯ ವೇಳೆ ಆರನೇ ಜಾಗದಲ್ಲಿ ಅಸ್ಥಿಪಂಜರದ ಅವಶೇಷಗಳು ಲಭಿಸಿವೆ. ಉಳಿದ ಏಳು ಕಡೆಗಳಲ್ಲಿ ಮೃತದೇಹದ ಯಾವುದೇ ಅವಶೇಷಗಳೂ ಸಿಕ್ಕಿಲ್ಲ. ಈ ಮಧ್ಯೆ ಸೋಮವಾರ ಗುರುತಿಸಿದ ಜಾಗಕ್ಕಿಂತ ಸುಮಾರು 100 ಮೀಟರ್ ದೂರದಲ್ಲಿ ಕಾಡಿನೊಳಗೆ ನೆಲದ ಮೇಲೆಯೇ ಅಸ್ಥಿಪಂಜರದ ಅವಶೇಷಗಳು ಲಭಿಸಿವೆ. ಉಳಿದ ಏಳು ಕಡೆಗಳಲ್ಲಿ ಮೃತದೇಹದ ಯಾವುದೇ ಅವಶೇಷಗಳೂ ಸಿಕ್ಕಿಲ್ಲ.

ಆರನೇ ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರನೇ ಗುರುತು ಸ್ಥಳದಲ್ಲಿ ಜುಲೈ 31ರಂದು ಅಸ್ಥಿಪಂಜರ ಪತ್ತೆಯಾದ ಘಟನೆಗೆ ಸಂಬಂಧಿಸಿ ಎಸ್.ಐ.ಟಿ ತನಿಖಾಧಿಕಾರಿ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಸ್ಟ್ 1ರಂದು ದೂರು ನೀಡಿದ್ದು, ಅದರಂತ ಯುಡಿಆರ್ ಪ್ರಕರಣ ದಾಖಲಾಗಿದೆ.

error: Content is protected !!
Scroll to Top