ಅನ್ಯಧರ್ಮದ ಯುವತಿಯನ್ನು ಪ್ರೀತಿಸಿದ ಯುವಕನ ಹತ್ಯೆ

ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಹಾಕಿ ಶರಣಾದ ಆರೋಪಿ

ಬೆಂಗಳೂರು: ಕೊಪ್ಪಳದ ಬಹದ್ದೂರ ಬಂಡಿ ಎಂಬಲ್ಲಿ ಭಾನುವಾರ ರಾತ್ರಿ ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಇದಕ್ಕೆ ಆತ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿದ್ದು ಕಾರಣ ಎನ್ನಲಾಗಿದೆ. ಗವಿಸಿದ್ದಪ್ಪ ನಿಂಗಜ್ಜ ನಾಯಕ್ (30) ಕೊಲೆಯಾದ ಯುವಕ.

ಸಾದಿಕ್ ಕೋಲ್ಕಾರ್​ ಎಂಬ ಯುವಕ ಗವಿಸಿದ್ದಪ್ಪ ನಾಯಕ್​​ನನ್ನು ಕೊಲೆ ಮಾಡಿದ್ದಾನೆ. ಅವನ ಜೊತೆಗೆ ಇನ್ನೂ ಮೂವರಿದ್ದರು ಎನ್ನಲಾಗಿದೆ. ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಅವರು ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಕೊಲೆ ಮಾಡಿದ ಬಳಿಕ ಸಾದಿಕ್​ ನೇರವಾಗಿ ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ. ಆತ ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್​​ 103(1) ಬಿಎನ್​ಎಸ್​ 2023 ಕಲಂ 3(2)ವಿ, ಎಸ್​ಸಿ-ಎಸ್​ಟಿ ಕಾಯ್ದೆ 1989 ಅಡಿಯಲ್ಲಿ ದೂರು ದಾಖಲಾಗಿದೆ.





















































 
 

ಕಳೆದ ಎರಡು ವರ್ಷಗಳಿಂದ ಗವಿಸಿದ್ದಪ್ಪ, ಗೌರಿ ಅಂಗಳ ಏರಿಯಾದ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ. ಒಂದು ಸಲ ಅವರು ಮನೆ ಬಿಟ್ಟು ಓಡಿ ಹೋಗಿದ್ದರು.‌ ಈ ಕುರಿತಂತೆ ನಾಲ್ಕೈದು ಬಾರಿ ಪಂಚಾಯತಿ ಸಹ ಮಾಡಲಾಗಿತ್ತು. ಆದರೂ ಸಹ ಗವಿಸಿದ್ದಪ್ಪ ಹಾಗೂ ಮುಸ್ಲಿಂ ಯುವತಿಯ ನಡುವೆ ಪ್ರೀತಿ ಮುಂದುವರಿದಿತ್ತು. ಹೀಗಾಗಿ ಗವಿಸಿದ್ದಪ್ಪನನ್ನು ಸಾದಿಕ್ ಮಚ್ಚಿನಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

error: Content is protected !!
Scroll to Top