ಅಕ್ರಮವಾಗಿ ಶೇಖರಿಸಿಟ್ಟ ಗಾಂಜಾ ವಶಪಡಿಸಿಕೊಂಡ ಪೊಲೀಸರು: ಆರೋಪಿ ಪರಾರಿ

ಬೆಳ್ತಂಗಡಿ: ಕಟ್ಟಡವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ ಗಾಂಜಾ‌ವನ್ನು ಪುಂಜಾಲಕಟ್ಟೆ ‌ಪೊಲೀಸರು ಪತ್ತೆ‌ಹಚ್ಚಿದ್ದು, ಆರೋಪಿ ಪರಾರಿಯಾಗಿದ್ದಾನೆ. ಈ ಪ್ರಕರಣವನ್ನು ಸದ್ಯ ಬೆಳ್ತಂಗಡಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ.

ಆರೋಪಿಯನ್ನು ಮದಡ್ಕದ ಚಿಲಿಂಬಿ ನಿವಾಸಿ ರಫೀಕ್ ಎಂಬಾತ ಪರಾರಿಯಾಗಿದ್ದಾನೆ. ಆತನ ಮನೆಯಲ್ಲಿ 160 ಗ್ರಾಂ ಗಾಂಜಾ ಶೇಖರಿಸಿ ಇಡಲಾಗಿತ್ತು. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿದ್ದು ದಾಳಿ ನಡೆಸಿದ್ದಾರೆ.

ಆರೋಪಿ ರಫೀಕ್ ವಿರುದ್ಧ ಈ ಹಿಂದೆಯೂ ಹಲವಾರು ಗಾಂಜಾ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇದೆ.





















































 
 

error: Content is protected !!
Scroll to Top