ಧರ್ಮಸ್ಥಳ: ನೂರಾರು ಹೆಣಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಗುರುತು ಮಾಡಲಾದ 11 ನೇ ಪಾಯಿಂಟ್ನಲ್ಲಿ ತನಿಖೆ ಕೈಬಿಟ್ಟಿರುವ SIT ಅಧಿಕಾರಿಗಳು ಮತ್ತೊಂದು ಸ್ಥಳದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
11 ನೇ ಪಾಯಿಂಟ್ನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಅನಾಮಿಕ ದೂರುದಾರ ಅಧಿಕಾರಿಗಳನ್ನು ಅಲ್ಲಿಂದ ಮೇಲ್ಭಾಗಕ್ಕೆ ಕರೆದೊಯ್ದಿದ್ದಾನೆ ಎನ್ನಲಾಗಿದ್ದು, ಈ ಬೆಳವಣಿಗೆ ಸಾಕಷ್ಟು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.
ಗುರುತು ಮಾಡಲಾದ 11 ನೇ ಪಾಯಿಂಟ್ ಹೆದ್ದಾರಿ ಬಳಿಯಲ್ಲೇ ಇದ್ದು, ಅದು ದಟ್ಟ ಕಾಡಾಗಿರುವ ಕಾರಣದಿಂದ ಆತ ಹೊಸ ಸ್ಥಳವನ್ನು ತಿಳಿಸಿರಬಹುದೇ ಎಂಬ ಸಂದೇಹಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಅಲ್ಲ ಹೊಸ ಸ್ಥಳಗಳನ್ನು ಆತ ಗುರುತು ಮಾಡಿದ್ದಾನೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅನಾಮಿಕ ಗುರುತು ಮಾಡಿದ್ದ 13 ಸ್ಥಳಗಳ ಪೈಕಿ 10 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಒಂದರಲ್ಲಿ ಮಾತ್ರ ಶವದ ಕಳೇಬರದ ಕುರುಹುಗಳು ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಬೇರೆ ಪ್ರದೇಶಗಳನ್ನು ಆತ ಗುರುತು ಮಾಡಿದ್ದಾನೆಯೇ ಎಂಬ ಸಂಶಯ ಎಲ್ಲರದ್ದು.
























