ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಕಳೆದ ಹದಿನಾಲ್ಕು ತಿಂಗಳುಗಳಿಂದ ಜೈಲು ಹಕ್ಕಿಯಾಗಿರುವ ಪ್ರಜ್ವಲ್ ಸದ್ಯ ಕೋರ್ಟ್ ನೀಡಿರುವ ತೀರ್ಪಿನಿಂದ ಮತ್ತೆ ಜೈಲಿನಲ್ಲೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಆಗಸ್ಟ್ 2 ರಂದು ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ.
ಸಿಐಡಿ ತನಿಖಾಧಿಕಾರಿಗಳು ಮತ್ತು ಆರೋಪಿಯ ಪರ ವಕೀಲರಿಂದ ಕೆಲವು ಸ್ಪಷ್ಟನೆಗಳ ಅಗತ್ಯತೆ ಇದ್ದುದರಿಂದ ತೀರ್ಪನ್ನು ಇಂದಿಗೆ ನ್ಯಾಯಾಲಯ ಕಾಯ್ದಿರಿಸಿತ್ತು. ಇಂದು ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇಂದು ಪ್ರಜ್ವಲ್ ದೋಷಿ ಒಂದು ಹೇಳಿ ನ್ಯಾಯಾಲಯ ತೀರ್ಪು ನೀಡಿರುವುದಾಗಿದೆ.
























