ಧರ್ಮಸ್ಥಳ ಕೇಸ್: ಏಳನೇ ಪಾಯಿಂಟ್‌ನಲ್ಲೂ ‌ಸಿಗಲಿಲ್ಲ ಕಳೇಬರದ ಕುರುಹು

ಧರ್ಮಸ್ಥಳ: ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ SIT ಇಂದೂ ಸಹ ಅನಾಮಿಕ ದೂರುದಾರ ‌ಗುರುತಿಸಿದ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದೆ.

ನಿನ್ನೆ ಆರನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಮಾನವ ದೇಹದ ಅವಶೇಷಗಳು ಪತ್ತೆಯಾಗಿತ್ತು. ಇಂದು ಏಳನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇದರಲ್ಲಿ ಸುಮಾರು ಆರು ಅಡಿಗಳಷ್ಟು ಗುಂಡಿಯಲ್ಲಿ ಹುಡುಕಿದರೂ ಯಾವುದೇ ಶವದ ಕುರುಹುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಅಧಿಕಾರಿಗಳು ಎಂಟನೇ ಪಾಯಿಂಟ್ ಬಳಿ ಉತ್ಖನನ ಆರಂಭ ಮಾಡಿದ್ದು, ಅಲ್ಲೇನಾದರೂ ಕುರುಹುಗಳು ಲಭ್ಯವಾಗುತ್ತದೆಯೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.





















































 
 
error: Content is protected !!
Scroll to Top