ಅಂಬೇಡ್ಕರ್‌ಗೆ ಅವಮಾನ : ನಟ ಪ್ರಥಮ್‌ಗೆ ಮಸಿ ಬಳಿದ ದಲಿತ ಮುಖಂಡರು

ಪೊಲೀಸ್‌ ಠಾಣೆ ಎದುರೇ ನಟನನ್ನು ಅಡ್ಡಗಟ್ಟಿ ಕ್ಷಮೆ ಕೇಳಲು ಒತ್ತಾಯ

ಬೆಂಗಳೂರು: ಅಂಬೇಡ್ಕರ್‌ಗೆ ಅಪಮಾನ ಮಾಡಿದ ಆರೋಪದ ಮೇಲೆ ಕನ್ನಡ ನಟ ಪ್ರಥಮ್‌ಗೆ ದಲಿತ ಸಂಘಟನೆಗಳ ಮುಖಂಡರು ಮಸಿ ಬಳಿದಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದಿದೆ.

ಜೀವ ಬೆದರಿಕೆ ಆರೋಪದ ಪ್ರಕರಣ ಸಂಬಂಧ ಪ್ರಥಮ್ ವಿಚಾರಣೆಗೆ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಠಾಣೆಯಿಂದ ಹೊರಬಂದ ಕೂಡಲೇ ನಟನನ್ನು ದಲಿತ ಸಂಘಟನೆಗಳ ಮುಖಂಡರು ಅಡ್ಡಗಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಸ್ಪಷ್ಟನೆ ನೀಡಲು ಮುಂದಾದ ಪ್ರಥಮ್‌ಗೆ ದಲಿತ ಮುಖಂಡರು ಏಕಾಏಕಿ ಮಸಿ ಬಳಿಯಲು ಮುಗಿಬಿದ್ದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಎದುರೇ ಘಟನೆ ನಡೆದಿದ್ದು, ಸಿಪಿಐ ಸಾಧಿಕ್ ಪಾಷಾ ಅವರು ಮುಖಂಡರಿಗೆ ಈ ರೀತಿ ಮಾಡದಂತೆ ತಿಳಿಸಿದ್ದರು. ಆದರೂ ಪಟ್ಟು ಬಿಡದ ದಲಿತ ಮುಖಂಡರು ಪ್ರಥಮ್ ಕಾರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದಾರೆ.





















































 
 

ತನಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಟ ಪ್ರಥಮ್ ದೂರು ದಾಖಲು ಮಾಡಿದ್ದು, ಈ ಪ್ರಕರಣ ಸಂಬಂಧ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಸ್ಥಳ ಮಹಜರ್ ಮತ್ತು ಹೇಳಿಕೆ ನೀಡಿ ವಾಪಸ್ ಹೋಗುವ ವೇಳೆ ಠಾಣೆಯ ಮುಂದೆ ಜಮಾಯಿಸಿದ ಅಂಬೇಡ್ಕರ್ ಭೀಮ ಸೇನೆಯ ಕಾರ್ಯಕರ್ತರು ಪ್ರಥಮ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ಪ್ರಥಮ್​ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಮುಂದಾದರು. ಆದ್ರೆ ಅಷ್ಟರಲ್ಲಿ ಅವರ ಮುಖಕ್ಕೆ ಕಾರ್ಯಕರ್ತನೋರ್ವ ಮಸಿ ಬಳಿಯಲು ಮುಂದಾದರು.

ಜುಲೈ 29ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಮಯದಲ್ಲಿ ಪ್ರಥಮ್ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಕರ್ನಾಟಕ ಭೀಮ ಸೇನೆ ಕಾರ್ಯಕರ್ತರು ಪೊಲೀಸ್​ ಠಾಣೆಯ ಅವರಣದಲ್ಲಿಯೇ ಪ್ರಥಮ್​ ಅವರಿಗೆ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಪಟ್ಟುಹಿಡಿದರು. ಈ ವೇಳೆ ಕಾರ್ಯಕರ್ತರೊಬ್ಬರು ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದರು. ಆಗ ತಕ್ಷಣ ಮಧ್ಯೆಪ್ರವೇಶಿಸಿದ ಪೊಲೀಸರು ಆ ಘಟನೆಯನ್ನು ತಡೆದು ಉದ್ರಿಕ್ತರನ್ನು ಅಲ್ಲಿಂದ ಕಳಿಸಿದರು.

error: Content is protected !!
Scroll to Top