ಬಂಟ್ವಾಳ : ಅಡಿಕೆ ಕಳ್ಳನ ಬಂಧನ

2,20,00 ರೂ. ಮೌಲ್ಯದ ಒಣ ಅಡಿಕೆ ಕಳ್ಳತನ ಮಾಡಿದ್ದ ಆರೋಪಿ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ಜುಲೈ 3ರಿಂದ 22ರ ಅವಧಿಯಲ್ಲಿ ಸುಮಾರು 45 ಪ್ಲಾಸ್ಟಿಕ್ ಚೀಲದಲ್ಲಿದ್ದ 2,20,00 ರೂ. ಮೌಲ್ಯದ ಒಣ ಅಡಿಕೆ ಕಳ್ಳತನ ಪ್ರಕರಣವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಜುಲೈ 28ರಂದು ಆರೋಪಿಗಳಲ್ಲಿ ಓರ್ವನಾದ ಸುಳ್ಯ ಪೈಚಾರು ಗ್ರಾಮ ನಿವಾಸಿ ಸತೀಶ್ (29 ವರ್ಷ) ಎಂಬಾತನನ್ನು ಬಂಧಿಸಿ ಕಳವುಗೈದ 74,000 ರೂ. ಮೌಲ್ಯದ 15 ಚೀಲ ಒಣ ಅಡಿಕೆ, ಅಡಿಕೆಯನ್ನು ಮಾರಾಟ ಮಾಡಿದ 70,000 ರೂ.ಯನ್ನು ವಶಪಡಿಸಿಕೊಳ್ಳಲಾಗಿದೆ.





















































 
 

ಆರೋಪಿಯು ಕೃತ್ಯಕ್ಕೆ ಬಳಸಿದ ಆಪೆ ಗೂಡ್ಸ್ ಅಂದಾಜು ಮೌಲ್ಯ 80,000 ರೂ. ಆಗಿದ್ದು ಒಟ್ಟು 2,24,000 ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

error: Content is protected !!
Scroll to Top