ಕಡಬ: ಒಕ್ಕಲಿಗ ಗೌಡ ಸೇವಾ ಸಂಘ (ರಿ) ಕಡಬ ತಾಲೂಕು ಇದರ ಮಾತೃ ಸಮಿತಿಯ ಆಶ್ರಯದಲ್ಲಿ , ತಾಲೂಕು ಮಹಿಳಾ ಘಟಕದ ನೇತೃತ್ವದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಲಿದೆ.
ಒಕ್ಕಲಿಗ ಸಮುದಾಯ ಭವನ ಹೊಸಮಠದಲ್ಲಿ ಆಗಸ್ಟ್ 10 ಭಾನುವಾರ ಬೆಳಗ್ಗೆ ಗಂಟೆ 9 ರಿಂದ ಕಾರ್ಯಕ್ರಮ ಆರಂಭವಾಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ವಹಿಸಿಕೊಳ್ಳಲಿದ್ದು, ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಟಿಕೂಟದ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರಾದ ಎಸ್. ಎಸ್. ಮಹಾದೇವಿ ಏನಡ್ಕ ನಡೆಸಿಕೊಡಲಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ವಿಶ್ವದ ಪ್ರತಿಷ್ಟಿತ ಕಾರು ಉತ್ಪಾದನಾ ಕಂಪನಿ ರೋಲ್ಸ್‌ರಾಯ್ಸ್‌ನಲ್ಲಿ ಉದ್ಯೋಗ ಪಡೆದ ಸಾಧಕಿ ರಿತುಪರ್ಣ, ದ.ಕ.ಸ.ಹಾ.ಉ.ಒಕ್ಕೂಟ ನಿಯಮಿತ ಮಂಗಳೂರು ಇದರ ನಿರ್ದೇಶಕ ಭರತ್ ನೆಕ್ರಾಜೆ, ಸನ್ನಿಧಿ ಪ್ರಾಕೃತಿಕ್ ಪೈಂಟ್ ಇಂಡಸ್ಟ್ರಿಸ್ ಹಳೆಯಂಗಡಿ ಮಂಗಳೂರು ಮಾಲಕಿ ಅಕ್ಷತ ಎ. ಕುಮಾರಮಂಗಿಲ ಸವಣೂರು ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಗೌಡ ಕೆ., ಟಾಟಾ ಕಾಫಿ ಲಿ. ನ ನಿವೃತ್ತ ಜ. ಮ್ಯಾನೇಜರ್ ಭವಾನಿಶಂಕರ್ ಪಿಂಡಿ ಮನೆ, ನೋಟರಿ ವಕೀಲ ಸುಂದರ ಗೌಡ ಕೆ. ಆಲಂಕಾರು, ತಿಮ್ಮಪ್ಪ ಗೌಡ ಕುಂಡಡ್ಕ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಮೇಶ್ ಕೊಲ್ಲೆಸಾಗು, ತಾಲೂಕು ಯುವ ಘಟಕದ ಅಧ್ಯಕ್ಷ ಪೂರ್ಣೇಶ್ ಗೌಡ ಬಬ್ಲುಬೆಟ್ಟು ಬಲ್ಯ, A.J. ದಂತ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮಧುಸೂದನ್ ಕುಶಾಲಪ್ಪ ಗೌಡ ಕೈಕುರೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿವಿಧ ಸ್ಪರ್ಧೆಗಳು, ಮಧ್ಯಾಹ್ನ ಸಹಭೋಜನ ವ್ಯವಸ್ಥೆಯ ಬಳಿಕ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಹೃದಯಿ ಸಮುದಾಯ ಬಂಧುಗಳನ್ನು ಪ್ರೀತಿಪೂರ್ವರವಾಗಿ ಆಮಂತ್ರಿಸಿರುವುದಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























