ತ್ರಿಶೂರ್: ಪತಿಯ ಮನೆಯವರ ಕಿರುಕುಳಕ್ಕೆ ನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ವೆಲ್ಲಂಗುಲರ್ನಲ್ಲಿ ನಡೆದಿದೆ.
ಫಸೀಲಾ(23) ಮೃತ ದುರ್ದೈವಿ.
ಕಳೆದ ಜುಲೈ 29 ರಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಫಸೀಲಾ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಫಸೀಲಾ ಕುಟುಂಬದವರು ಆಕೆಯ ಪತಿ ನೌಫಲ್ ಮತ್ತು ಅತ್ತೆ ರಮ್ಲಾ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಫಸೀಲಾ ತನ್ನ ತವರು ಮನೆಯವರಿಗೆ ಸಂದೇಶ ಕಳುಹಿಸಿದ್ದು, ನಾನು ಎರಡನೇ ಬಾರಿ ಗರ್ಭಿಣಿಯಾಗಿದ್ದೇನೆ. ನನ್ನ ಪತಿ ನನ್ನ ಹೊಟ್ಟೆಗೆ ಒದೆಯುತ್ತಾರೆ. ನನ್ನ ಕೈ ಮುರಿದಿದ್ದಾರೆ. ಅತ್ತೆ ಸಹ ನನ್ನನ್ನು ನಿಂದಿಸುತ್ತಾರೆ. ನಾನು ಸಾಯುತ್ತೇನೆ. ಇಲ್ಲವಾದಲ್ಲಿ ಅವರೇ ನನ್ನನ್ನು ಕೊಲ್ಲುತ್ತಾರೆ ಎಂಬುದಾಗಿ ಮಾಹಿತಿ ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇರಿಂಜಲಕೂಡ ಪೊಲೀಸರು ಕೇ ಸು ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಫಸೀಲಾ ಅವರಿಗೆ ಒಬ್ಬ ಪುತ್ರ ಇದ್ದಾನೆ.
























