ಹೆತ್ತಮ್ಮನನ್ನೇ ಅಮಾನವೀಯವಾಗಿ ಕೊಂದು ಸುಟ್ಟು ಹಾಕಿದ ಪಾಪಿ ಕುಡುಕ ಪುತ್ರ

ಚಿಕ್ಕಮಗಳೂರು: ಹಕ್ಕಿಮಕ್ಕಿ ಗ್ರಾಮದಲ್ಲಿ ಹೆತ್ತ ತಾಯಿಯನ್ನೇ ಕುಡುಕ ಪುತ್ರನೊಬ್ಬ ಕೊಂದು ಸುಟ್ಟು ಹಾಕಿದ ಅಮಾನವೀಯ ಘಟನೆ ನಡೆದಿದೆ.

ಆರೋಪಿಯನ್ನು ಪವನ್ ಎಂದು ಗುರುತಿಸಲಾಗಿದೆ.

ಮೃತರನ್ನು ಭವಾನಿ ಎಂದು ಗುರುತಿಸಲಾಗಿದೆ.





















































 
 

ಕೂಲಿ ಕೆಲಸ ಮಾಡಿ ತಾಯಿಯ ಜೊತೆಗೆ ವಾಸಿಸುತ್ತಿದ್ದ ಈತ ಕಳೆದ ರಾತ್ರಿ ಹೆತ್ತಮ್ಮ ನನ್ನು ಕೊಂದು ಬೆಂಕಿ ಹಾಕಿದ್ದಾನೆ. ಬಳಿಕ ಅಲ್ಲೇ ಪ್ರಜ್ಞೆ ಇಲ್ಲದವನಂತೆ ಮಲಗಿ ನಿದ್ರಿಸಿದ್ದಾನೆ. ಮೃತ ಭವಾನಿ ಅವರ ದೇಹ ಸಂಪೂರ್ಣ ಸುಟ್ಟು ಹೋಗಿದ್ದು ಕೇವಲ ಕೈ ಮತ್ತು ಕಾಲುಗಳಷ್ಟೇ ಉಳಿದಿವೆ.

ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಕೆಲ ತಿಂಗಳ ಹಿಂದೆ ಆರೋಪಿ ಪವನ್ ತನ್ನ ತಂದೆ ಸೋಮೇ ಗೌಡ ಎಂಬವರ ಮೇಲೆ ಲೆದರ್ ಬೆಲ್ಟ್ ಬಳಸಿ ಹಲ್ಲೆ ಮಾಡಿದ್ದು ಚರ್ಮ ಕಿತ್ತು ಬಂದಿತ್ತು ಎಂದು ತಡವಾಗಿ ತಿಳಿದು ಬಂದಿದೆ.

ಕೂಲಿ ಕೆಲಸ ಮಾಡುತ್ತಿದ್ದ ಪವನ್ ನಿತ್ಯ ಕುಡಿದು ಬಂದು ಹೆತ್ತವರಿಗೆ ಹಿಂಸೆ ನೀಡುತ್ತಿದ್ದ. ಅಕ್ಕಪಕ್ಕದವರು ಬುದ್ಧಿ ಹೇಳಿದರೂ ಆತ ಬದಲಾಗಿರಲಿಲ್ಲ. ಈಗ ಹೆತ್ತ ತಾಯಿಯನ್ನೇ ಕೊಂದು ಪೊಲೀಸರ ವಶಕ್ಕೆ ಬಿದ್ದಿದ್ದಾನೆ.

error: Content is protected !!
Scroll to Top