ಧರ್ಮಸ್ಥಳ: ದೇಶವನ್ನೇ ತನ್ನೆಡೆ ಸೆಳೆದಿರುವ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳು ಗುರುತಿಸಲಾದ 6 ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದು, ಇಲ್ಲಿ ಕಳೇಬರದ ಕುರುಹು ಸಿಕ್ಕಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ನಿನ್ನೆಯ ಕಾರ್ಯಾಚರಣೆಯಲ್ಲಿ ಪಾನ್ ಕಾರ್ಡ್, ಎಟಿಎಮ್ ಕಾರ್ಡ್, ರವಿಕೆ ಸಿಕ್ಕಿರುವುದಾಗಿ ಅನಾಮಿಕ ದೂರುದಾರನ ಪರ ವಕೀಲ ಮಂಜುನಾಥ ಎನ್. ಪತ್ರ ಹಂಚಿಕೊಂಡಿದ್ದರು. ಆದರೆ ಈ ಬಗ್ಗೆ SIT ಅಧಿಕಾರಿಗಳು ಮಾತ್ರ ಖಚಿತ ಮಾಹಿತಿ ನೀಡಿರಲಿಲ್ಲ.
ಆದರೆ ಇಂದು ದೂರುದಾರನ ಪರ ವಕೀಲ ಸತ್ಯಮೇವ ಜಯತೇ ಎಂದು ಪೋಸ್ಟ್ ಹಂಚಿಕೊಂಡಿದ್ದು, ಇದು ಆರನೇ ಪಾಯಿಂಟ್‌ನಲ್ಲಿ ಹೂತಿಟ್ಟ ಶವದ ಕಳೇಬರ ಸಿಕ್ಕಿದೆ ಎನ್ನುವ ಸೂಚನೆಯೇ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿದೆ.
ಈ ಪಾಯಿಂಟ್‌ನಲ್ಲಿ ಕೆಲವು ಬುರುಡೆ, ಮೂಳೆಗಳು ಸಿಕ್ಕಿದ್ದು, ಇದನ್ನು ವಿಧಿವಿಜ್ಞಾನ ತಜ್ಞರು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕಿದೆ ಎಂಬುದಾಗಿಯೂ ಹೇಳಲಾಗುತ್ತಿದೆ.
ಈ ಬಗ್ಗೆ ಸತ್ಯಾಂಶ ಏನು ಎಂಬುದನ್ನು SIT ಅಧಿಕಾರಿಗಳೇ ಖಚಿತಪಡಿಸಬೇಕಿದೆ.
























