ಕಾಂಗ್ರೆಸ್‌ಗೆ ದೇಶದ ಭದ್ರತೆ ಮುಖ್ಯವಲ್ಲ, ಓಟ್‌ಬ್ಯಾಂಕ್ ಓಲೈಕೆ ಮುಖ್ಯ: ಅಮಿತ್ ಶಾ ವಾಗ್ದಾಳಿ

ನವದೆಹಲಿ: ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ್ ಮತ್ತು ಆಪರೇಷನ್ ಮಹಾದೇವ್‌ಗೆ ಸಂಬಂಧಿಸಿದ ಹಾಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಾಕ್ ಆಕ್ರಮಿತ ಕಾಶ್ಮೀರವನ್ನು ನೀವು ಬಿಟ್ಟು ಕೊಟ್ಟಿದ್ದೀರಿ. ಆದರೆ ನಾವದನ್ನು ಮರಳಿ ಪಡೆಯುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಹಿಂದೆ ಯುದ್ಧಗಳನ್ನು ಮಾಡುವಾಗ ಛತ್ರಪತಿ ಶಿವಾಜಿ ಮಹಾರಾಜರು ‘ಹರ ಹರ ಮಹಾದೇವ್’ ಎಂದು ಘೋಷಣೆ ಕೂಗುತ್ತಿದ್ದರು. ಸೈನಿಕರಲ್ಲಿ ಈ ಶಬ್ದ ಉತ್ಸಾಹ ತುಂಬುತ್ತಿತ್ತು. ಇದನ್ನು ಧರ್ಮದ ಆಧಾರದಲ್ಲಿ ನೋಡಬಾರದು. ಇದು ಯೋಧರಿಗೆ ‌ವಿಜಯದ ಉತ್ಸಾಹ ತುಂಬುತ್ತದೆ ಎಂದು ಹೇಳಿದ್ದಾರೆ.





















































 
 

ಆಪರೇಷನ್ ಮಹಾದೇವ್ ಹೆಸರಿನಲ್ಲಿ ಮೂವರು ಉಗ್ರರನ್ನು ಯಮಪುರಕ್ಕೆ ಅಟ್ಟಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಗುಂಡು ಹಾರಿಸಿದ ಲಷ್ಕರ್ – ಎ- ತೈಬಾ ಸಂಘಟನೆಯ ಉಗ್ರ ಸುಲೇಮಾನ್ ಎಂಬವನನ್ನು ಕೊಲ್ಲಲಾಗಿದೆ. ಹಾಗೆಯೇ LET ಉಗ್ರ ಹಮ್ಸಾ ಅಫ್ಘಾನಿ, ಉಗ್ರ ಜಿಬ್ರಾನ್‌ನನ್ನು ಹತ್ಯೆ ಮಾಡಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ LET ಭಾಗಿಯಾಗಿರುವುದು ಪುರಾವೆಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಅವರು ನುಡಿದಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ದೇಶದ ಭದ್ರತೆ ಮುಖ್ಯವಲ್ಲ. ರಾಜಕೀಯ ಮುಖ್ಯ. ಅವರು ತಮ್ಮ ಓಟ್‌ಬ್ಯಾಂಕ್‌ಗಳನ್ನು ಸಮಾಧಾನಪಜಿಸುವುದರಲ್ಲೇ ತಲ್ಲೀನರಾಗಿರುವುದು ದೇಶದ ಜನರ ಕಣ್ಣಿಗೆ ಕಾಣುತ್ತದೆ ಎಂದಿದ್ದಾರೆ.

error: Content is protected !!
Scroll to Top