ಸುಳ್ಯ : ಅಕ್ರಮ ಗೋಸಾಗಾಟ ಪತ್ತೆ, ಇಬ್ಬರ ಬಂಧನ

ಸುಳ್ಯ: ಬೆಳ್ಳಾರೆ ಪೊಲೀಸರು ಮಂಗಳವಾರ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದಾರೆ. ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಹಾಸನ ಕಡೆಯಿಂದ ಪಂಜ – ಬೆಳ್ಳಾರೆ – ನೆಟ್ಟಾರು ಮಾರ್ಗವಾಗಿ ಈಶ್ವರಮಂಗಲಕ್ಕೆ 5 ಎಮ್ಮೆಗಳನ್ನು ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ನೆಟ್ಟಾರಿನಲ್ಲಿ ಪಿಕಪ್ ಅನ್ನು ತಡೆದು ನಿಲ್ಲಿಸಿ ಇಬ್ಬರು ಆರೋಪಿಗಳು, 5 ಎಮ್ಮೆಗಳನ್ನು ಪಿಕಪ್ ಸಮೇತ ವಶಪಡಿಸಿಕೊಂಡಿದ್ದಾರೆ.

ಕಾಸರಗೋಡಿನ ದೇಲಂಪಾಡಿ ಮುಜಾಮಿನ್ ಮತ್ತು ಅಬ್ದುಲ್ಲ ಬಂಧಿತ ಆರೋಪಿಗಳು. ಆರೋಪಿಗಳನ್ನು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಳ್ಳಾರೆ ಎಸ್‌ಐ ಸಂತೋಷ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದಾರೆ.





















































error: Content is protected !!
Scroll to Top