ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮೂರನೇ ದಿನವೂ ಕಾರ್ಯಾಚರಣೆ ಮುಂದುವರಿದಿದ್ದು, ಇಂದು ಸಹ ಹಲವಾರು ಹೆಣಗಳನ್ನು ಹೂಳಲಾಗಿದೆ ಎಂದ ಸ್ಥಳಗಳಲ್ಲಿ ಕೆಲವನ್ನು ದೂರುದಾರ ಗುರುತಿಸಿದ್ದು, ಆ ಪ್ರದೇಶಕ್ಕೆ ದೂರದಾರ ವ್ಯಕ್ತಿಯ ಜೊತೆ SIT ಅಧಿಕಾರಿಗಳು ಆಗಮಿಸಿದ್ದಾರೆ.
ಗುರುತು ಮಾಡಿದ ಎರಡನೇ ಸ್ಥಳದ ಅಗೆತ ಕಾರ್ಯಕ್ಕೆ ಪೌರ ಕಾರ್ಮಿಕರ ಸಹಾಯ ಪಡೆಯಲಾಗಿದೆ. ಅರಣ್ಯ ಪ್ರದೇಶವಾದ್ದರಿಂದ ಅಲ್ಲಿಗೆ ಹಿಟಾಚಿ ತೆರಳಲು ಅನುಕೂಲಗಳಿಲ್ಲವಾಗಿದ್ದು ಈ ಹಿನ್ನೆಲೆ ಪೌರ ಕಾರ್ಮಿಕರನ್ನು ಈ ಕಾರ್ಯಕ್ಕೆ ಬಳಸಲಾಗಿದೆ.

