ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ : ಉತ್ತೇಜನ – 2025 ಕಾರ್ಯಕ್ರಮ

ಉಡುಪಿ: 2024-25 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನ ‘ಉತ್ತೇಜನ ‘ ಜ್ಞಾನದ ಸಿರಿಗೆ ಸನ್ಮಾನ ಘೋಷ ವಾಕ್ಯದೊಂದಿಗೆ ಆಯೋಜನೆ ಮಾಡಲಾಗಿದೆ.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆ ಹೈಸ್ಕೂಲ್ ವಿಭಾಗದ 2024 – 25ನೇ ಸಾಲಿನ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಸಂಸ್ಥೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ‘ಉತ್ತೇಜನ’ ಜ್ಞಾನದ ಸಿರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವುದಾಗಿದೆ.

ಇದೇ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯ ಸಿದ್ದಾಪುರ ಸಂಸ್ಥೆಯ ಟಾಪರ್ ಗಿರೀಶ್ ನಾಯಕ್, ಯು. ಎಸ್. ನಾಯಕ್ ಪ್ರೌಢಶಾಲೆ ಪಟ್ಲ ಟಾಪರ್ ಅಭಿನವ ಅಶೋಕ್ ನಾಯ್ಕ್, ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಟಾಪರ್ ಲಹರಿ ಎಸ್. ಶೆಟ್ಟಿ, ಇವರನ್ನು ಸನ್ಮಾನಿಸಲಾಯಿತು.





















































 
 

ಪಿ .ಆರ್. ಎನ್. ಅಮೃತ ಭಾರತಿ ವಿದ್ಯಾ ಕೇಂದ್ರ ಹೆಬ್ರಿಯ ಟಾಪರ್ ಸಾನ್ವಿ ಕೆ., ಅಕ್ಷಯ್ ಅಶೋಕ್ ಶೆಟ್ಟಿ, ಸ್ವಸ್ತಿ ಎಸ್. ಕಿಣಿ, ಅಮೃತ ಭಾರತಿ‌ ವಿದ್ಯಾಲಯ ಹೆಬ್ರಿ ಟಾಪರ್ ಪೂರ್ವಿ ಎಂ. ರಾವ್, ಶ್ರೀ ರಾಮ ವಿದ್ಯಾ ಕೇಂದ್ರ ಕೋಡಿ ಟಾಪರ್ ದೀಕ್ಷಾ ದೇವಾಡಿಗ, ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಟಾಪರ್ ಅನುಷ ಪೂಜಾರಿ ಇವರಿಗೆ ಸನ್ಮಾನ ನಡೆಯಲಿದೆ‌ ಎಂದು ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಮುಖ್ಯೋಪಾಧ್ಯಾಯರು , ಬೋಧಕ ಬೋಧಕೇತರ ವರ್ಗದವರು,ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯದರ್ಶಿ ಉಪಸ್ಥಿತರಿದ್ದರು

error: Content is protected !!
Scroll to Top