ಬಸ್‌ಗೆ ಲಾರಿ ಡಿಕ್ಕಿ : 18 ಕನ್ವರ್‌ ಯಾತ್ರಿಗಳ ದಾರುಣ ಸಾವು

ಕನ್ವರ್‌ ಯಾತ್ರಿಗಳ ಪಾಲಿಗೆ ಕರಾಳ ದಿನವಾದ ಮಂಗಳವಾರ

ಜಾರ್ಖಂಡ್‌: ಕನ್ವರ್‌ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್ಸಿಗೆ ಗ್ಯಾಸ್‌ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ 18 ಮಂದಿ ಮೃತಪಟ್ಟಿರುವ ಭೀಕರ ಅಪಘಾತ ಇಂದು ಮುಂಜಾನೆ ಜಾರ್ಖಂಡ್‌ನ ದಿಯೋಘಡ್‌ ಎಂಬಲ್ಲಿ ಸಂಭವಿಸಿದೆ.

ದಿಯೋಘಡ್‌ನ ಮೋಹನಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಜಮುನಿಯ ಅರಣ್ಯ ಪ್ರದೇಶ ಭಾಗದಲ್ಲಿ ಕನ್ವರ್‌ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಮಿನಿಬಸ್‌ಗೆ ಮುಂಜಾನೆ 4.30ರ ವೇಳೆಗೆ ಗ್ಯಾಸ್‌ ಸಿಲಿಂಡರ್‌ಗಳಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.





















































 
 

ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಬಸ್‌ ಎರಡು ಭಾಗವಾಗಿದೆ. ಇಲ್ಲಿನ ದೃಶ್ಯ ಘೋರವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾರೆ. ಗಾಯಾಳುಗಳು ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಶ್ರಾವಣ ಮಾಸದಲ್ಲಿ ಶ್ರಾವಣಿ ಕನ್ವರ್‌ ಯಾತ್ರೆಗೆ ಹೋಗುವುದು ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿರುವ ಒಂದು ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಆದರೆ ನಾಗರ ಪಂಚಮಿಯ ಶುಭದಿನ ಕನ್ವರ್‌ ಯಾತ್ರಿಗಳ ಪಾಲಿಗೆ ಕರಾಳ ದಿನವಾಗಿ ಪರಿಣಮಿಸಿದೆ.

error: Content is protected !!
Scroll to Top