ಬಿಲ್ಲವ ಸಂಘಟನೆಯ ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ: ಸತೀಶ್ ಕುಮಾರ್ ಕೆಡೆಂಜಿ

ಪುತ್ತೂರು ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ

ಪುತ್ತೂರು: ಬಿಲ್ಲವರು ಒಗ್ಗಟ್ಟಾಗಿ ಪ್ರದರ್ಶಿಸಬೇಕು. ನಮ್ಮಲ್ಲಿ ಸಂಘಟನೆಯ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲ. ಬಿಲ್ಲವ ಸಂಘ ಬಲವರ್ಧನೆಯಾಗಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಲು 55 ಗ್ರಾಮ ಸಮಿತಿಗಳೇ ಕಾರಣ ಎಂದು ಬಿಲ್ಲವ ‌ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಬಪ್ಪಳಿಗೆಯ ಬ್ರಹ್ಮಶ್ರೀ ‌ನಾರಾಯಣಗುರುಸ್ವಾಮಿ ಬಿಲ್ಲವ ಸಂಘದ 49 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ‌ ಮಾತನಾಡಿ, ಬಿಲ್ಲವ ಸಂಘದ ಹಿರಿಯರ ತ್ಯಾಗ, ಸೇವೆಯ ಫಲ ಎಂಬಂತೆ ಇಂದು ಪುತ್ತೂರಿನಲ್ಲಿ ಬಿಲ್ಲವ ಸಂಘ ಮುಂದುವರೆದಿದೆ. ಮುಂದಿನ ದಿನಮಾನಗಳಲ್ಲೂ ನಮ್ಮ ಸಂಘದಿಂದ ವಿವಿಧ ಕಾರ್ಯಕ್ರಮ ನಡೆಯಲಿದ್ದು ಎಲ್ಲರ‌ ಸಹಕರಿಸುವಂತೆ ವಿನಂತಿಸಿದರು.





















































 
 

ಕಾರ್ಯಕ್ರಮದಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು, ಈ ಸಂದರ್ಭದಲ್ಲಿ 2025-28 ಚುನಾವಣೆ ಸಾಲಿನ ಸಂಘದ ಕಾರ್ಯಕಾರಿ ಸಮಿತಿಯ ರಚನೆ ಪಟ್ಟಿಯ ಜೊತೆಗೆ ಚುನಾವಣಾಧಿಕಾರಿಯಾಗಿ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮೋನಪ್ಪ ಪೂಜಾರಿರವರನ್ನು ನೇಮಿಸಲಾಗುವುದೆಂದು ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಅಧಿಕೃತವಾಗಿ ಘೋಷಿಸಿದರು. ಕಾರ್ಯಕಾರಿ ಸಮಿತಿಯಲ್ಲಿ ವಲಯ ಸಂಚಾಲಕರಾಗಿ ದೇವಿಕಾ ಬನ್ನೂರು, ನಾಗೇಶ್ ಬಲ್ನಾಡು, ರಾಮಚಂದ್ರ ಪೂಜಾರಿ ಬೆಳ್ಳಿಪ್ಪಾಡಿ, ಅಶೋಕ್‌ ಕುಮಾ‌ರ್ ಪಡ್ಡು, ಅಜಿತ್ ಕುಮಾರ್ ಪಾಲೇರಿ, ಬಾಬು ಪೂಜಾರಿ ಇದ್ದಾಡಿ, ಗಿರೀಶ್ ಕುಮಾರ್ ಕನ್ನಡ್ಕ, ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಸಂತೋಷ್ ಕುಮಾರ್ ಮರಕ್ಕಡ, ದಿನೇಶ್ ಕೇಪುಳು, ಲಕ್ಷ್ಮೀಶ ಬಂಗೇರ, ಸತೀಶ್ ಕೆ.ಐತೂರು, ಸಂಘ-ಸಂಸ್ಥೆ ಪ್ರತಿನಿಧಿಗಳಾಗಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪುಷ್ಪಾವತಿ ಬಿ.ಎಮ್, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ ಅನಂತಿಮಾರು, ಉಪ್ಪಿನಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ನಾಣ್ಯಪ್ಪ ಪೂಜಾರಿ, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಯಂತ್ ನಡುಬೈಲು, ವಿವಿಧ ಗ್ರಾಮ ಸಮಿತಿ ಅಧ್ಯಕ್ಷರುಗಳಾದ ಪುತ್ತೂರು ನಗರ ವಲಯದಿಂದ ಮೋಹನ್ ತೆಂಕಿಲ(ಪುತ್ತೂರು ಕಸಬಾ), ಶೀನಪ್ಪ ಪೂಜಾರಿ ಬನ್ನೂರು(ಬನ್ನೂರು), ಕೇಶವ ಪೂಜಾರಿ ಬೆದ್ರಾಳ(ಕೇಪುಳು-ಬೆದ್ರಾಳ), ಬಲ್ನಾಡು ವಲಯದಿಂದ ಉಮೇಶ್‌ ಬಾಯಾರು(ಬಲ್ನಾಡು), ಸುಂದರ ಪೂಜಾರಿ ಕಾಡ್ಲ(ಬುಳೇರಿಕಟ್ಟೆ), ಕೇಶವ ಪೆಲತ್ತಡಿ(ಕೊಡಿಪ್ಪಾಡಿ), ಶ್ರೀಧರ ಪೂಜಾರಿ ನೈತ್ತಾಡಿ(ಕೆಮ್ಮಿಂಜೆ),ಪುತ್ತೂರು ಗ್ರಾಮಾಂತರ ವಲಯದಲ್ಲಿ ರವಿಚಂದ್ರ ಪಡ್ಡಾಯೂರು(ಪಡೂರು), ಅಣ್ಣಿ ಪೂಜಾರಿ ಅನಂತಿಮಾರು(ಚಿಕ್ಕಮುಡ್ನರು), ವಸಂತ ಪೂಜಾರಿ(ಬೆಳ್ಳಿಪ್ಪಾಡಿ), ಉಲ್ಲಾಸ್ ಕೋಟ್ಯಾನ್(ಕೋಡಿಂಬಾಡಿ), ಮನೋಹ‌ರ್ ಕಾರ್ಜಾಲು(ಕಬಕ), ಉಪ್ಪಿನಂಗಡಿ ವಲಯದಿಂದ ವಸಂತ ಕುಕ್ಕುಜೆ(ಉಪ್ಪಿನಂಗಡಿ), ಗೋಪಾಲ ಎಚ್.ಎ(34ನೇ ನೆಕ್ಕಿಲಾಡಿ), ಸದಾಶಿವ ಬಂಗೇರ ಎಲಿಯ(ಹಿರೇಬಂಡಾಡಿ), ಸೋಮಸುಂದರ(ಬಜತ್ತೂರು), ನೆಲ್ಯಾಡಿ ವಲಯದಿಂದ ಬಾಬು ಪೂಜಾರಿ(ಗೋಳಿತ್ತೊಟ್ಟು-ಆಲಂತಾಯ), ಮಾಧವ ಪೂಜಾರಿ(ಶಿರಾಡಿ-ಕೊಣಾಜೆ-ಸಿರಿಬಾಗಿಲು), ಗಿರೀಶ್ ಸಾಲಿಯಾನ್ ಬದನೆ(ಇಚ್ಚಂಪಾಡಿ) ನೋಣಯ್ಯ ಅಂಬರ್ಜೆ(ನೆಲ್ಯಾಡಿ-ಕೌಕ್ರಾಡಿ-ಕೊಣಾಲು), ಆರ್ಯಾಪು ವಲಯದಿಂದ ರವಿ ಸುವರ್ಣ(ಆರ್ಯಾಪು), ಸುಂದರ ಪೂಜಾರಿ(ಕುರಿಯ), ಚಿದಾನಂದ ಸುವರ್ಣ(ಕುಂಜೂರುಪಂಜ), ಆನಂದ ಪೂಜಾರಿ(ಇರ್ದೆ-ಬೆಟ್ಟಂಪಾಡಿ), ವಿಶ್ವನಾಥ ಪೂಜಾರಿ(ಪಾಣಾಜೆ), ರಾಜೇಶ್ ನೆಲ್ಲಿತ್ತಡ್ಕ(ನಿಡ್ನಳ್ಳಿ), ಕುಂಬ್ರ ವಲಯದಿಂದ ಸುಶಾಂತ್ ಅಜ್ಜಿಕಲ್ಲು(ಒಳಮೊಗ್ರು), ವಿಶ್ವನಾಥ ಪೂಜಾರಿ(ಕೆಯ್ಯರು), ಬಾಲಪ್ಪ ಪೂಜಾರಿ(ಕೆದಂಬಾಡಿ), ಸುಂದರ ಪೂಜಾರಿ(ಕೊಳಿಗೆ), ಭರತ್ ಪೂಜಾರಿ(ಅರಿಯಡ್ಕ), ತಾರಾನಾಥ(ಪಾಲ್ತಾಡಿ), ಬಡಗನ್ನೂರು ವಲಯದಿಂದ ಜನಾರ್ದನ ಪೂಜಾರಿ ಪದಡ್ಕ(ಸುಳ್ಯಪದವು-ಪಡುವನ್ನೂರು), ಪ್ರಕಾಶ್ ಸಾಲಿಯಾನ್(ಬಡಗನ್ನೂರು), ನಾರಾಯಣ ಪೂಜಾರಿ(ನೆಟ್ಟಣಿಗೆ ಮುನ್ನೂರು), ಮೋನಪ್ಪ ಪೂಜಾರಿ(ಕಾವು), ನರಿಮೊಗರು ವಲಯದಿಂದ ಹರೀಶ್ ಎಂ.ಕೆ(ನರಿಮೊಗರು), ನಾರಾಯಣ ಪೂಜಾರಿ(ಆನಡ್ಕ), ದಾಮೋದರ್ ಕೆ(ಶಾಂತಿಗೋಡು), ಉಮೇಶ್ ಎಸ್.ಡಿ(ಸರ್ವೆ), ಅನಿಲ್ ಕನ್ನರ್ ನೂಜಿ(ಮುಂಡೂರು), ಸವಣೂರು ವಲಯದಿಂದ ವಿಜಯಕುಮಾರ್ ಸೊರಕೆ(ಕಾಣಿಯೂರು-ಚಾರ್ವಾಕ-ದೋಲ್ಪಾಡಿ), ಸತೀಶ್ ಕುಮಾರ್ ಕೆಡೆಂಜಿ(ಕುದ್ಮಾರು-ಬೆಳಂದೂರು-ಕಾಯ್ಕೆಮಣ), ಅಕ್ಷಯ್ ಕುಮಾ‌ರ್(ಸವಣೂರು-ಪುಚ್ಚಪ್ಪಾಡಿ), ಆಲಂಕಾರು ವಲಯದಿಂದ ಚಂದ್ರಶೇಖರ(ಆಲಂಕಾರು), ಪುರುಷೋತ್ತಮ(ಹಳೇನೇರಂಕಿ), ಸಂಜೀವ ಮಾರಂಗ(ರಾಮಕುಂಜ-ಕೊಯಿಲ), ಉದಯಕುಮಾ‌ರ್(ಪೆರಾಬೆಕುಂತೂರು), ಕಡಬ ವಲಯದಿಂದ ಹರೀಶ್ ಡಿ.ಎಚ್(ಬಲ್ಯ), ಜಯಪ್ರಕಾಶ್ ದೋಳ(ಕಡಬ-ಕುಟ್ರುಪ್ಪಾಡಿ), ಬಾಬು ಪೂಜಾರಿ(ಕೋಡಿಂಬಾಳ), ಮರ್ದಾಳ ವಲಯದಿಂದ ರಧೀಶ್(ನೂಜಿಬಾಳ್ತಿಲ), ಸಂಜೀವ ಪೂಜಾರಿ(ರೆಂಜಿಲಾಡಿ), ಉದಯ ಮಿತ್ತೋಡಿ(ಐತೂರು-ಬಂಟ್ರ-102ನೆಕ್ಕಲಾಡಿ), ನೋಣಯ್ಯ ಕೆ(ಕೊಂಬಾರು-ಬಿಳಿನೆಲೆ)ರವರು ಆಯ್ಕೆಯಾಗಿದ್ದಾರೆ.

ವೇದಿಕೆಯಲ್ಲಿ ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರಾ ಉಪಸ್ಥಿತರಿದ್ದರು.

ಸಭೆಯಲ್ಲಿ 2024-25ನೇ ಸಾಲಿನ ಸಂಘದ ಬಜೆಟಿನಲ್ಲಿನ ಹೆಚ್ಚುವರಿ ಖರ್ಚು ಮಂಜೂರಾತಿ ಪಡೆಯಲಾಯಿತು. 2025-26ನೇ ಸಾಲಿನ ಆಯವ್ಯಯ ಮಂಡನೆ ಮಾಡಲಾಯಿತು. ಉಪಾಧ್ಯಕ್ಷ ಅಶೋಕ್‌ ಕುಮಾ‌ರ್ ಪಡ್ಡು ಸ್ವಾಗತಿಸಿದರು. ಕಾರ್ಯದರ್ಶಿ ಚಿದಾನಂದ ಸುವರ್ಣ ವರದಿ ಮಂಡಿಸಿದರು. ಸಂಘದ ಲೆಕ್ಕಪತ್ರವನ್ನು ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಗುರುಮಂದಿರದ ಲೆಕ್ಕಪತ್ರವನ್ನು ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ ನೀಡಿದರು. ಉಪಾಧ್ಯಕ್ಷೆ ವಿಮಲಾ ಸುರೇಶ್ ವಂದಿಸಿದರು.

error: Content is protected !!
Scroll to Top