ಮಂಡ್ಯ: ಸರ್ಕಾರದ ಬಳಿ ಹಣವಿಲ್ಲ ಎಂದು ಬಿಜೆಪಿ ಸುಳ್ಳು ಹೇಳುತ್ತಿದ್ದು, ಆ ಸುಳ್ಳುಗಳನ್ನು ಯಾರೂ ನಂಬದಂತೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾವು ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಪೂರೈಸಲು ಸರ್ಕಾರದ ಬಳಿ ಹಣವಿಲ್ಲ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಬಿಜೆಪಿಯವರ ಮತ್ತೊಂದು ಹೆಸರೇ ಸುಳ್ಳು. ಅವರ ಸುಳ್ಳು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ನಾನು ಗೊಬ್ಬರ ಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಅದನ್ನು ರಾಜಕೀಯ ಮಾಡುವ ಕೆಲಸ ಬಿಜೆಪಿ ಮಾಡಿದೆ. ರಾಜ್ಯ ಸರ್ಕಾರ ಗೊಬ್ಬರ ತಯಾರಿಸುವುದಿಲ್ಲ. ಕೇಂದ್ರ ಸರ್ಕಾರ ಅದನ್ನು ನೀಡಬೇಕು. ಇಲ್ಲಿ ಬಿಜೆಪಿಯೇ ಪ್ರತಿಭಟನೆ ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ನಡ್ಡಾ ಬಳಿ ತೆರಳಿ ಬಿಜೆಪಿಯವರು ಗೊಬ್ಬರ ಕೊಡಿಸುವ ಕೆಲಸ ಮಾಡಬೇಕು. ಬಿಜೆಪಿ ಏನೇ ಬೂಟಾಟಿಕೆ ಪ್ರದರ್ಶಿಸಿದರೂ 2028 ಕ್ಕೆ ಮತ್ತೆ ನಾವೇ ಅಧಿಕಾರ ಹಿಡಿಯುತ್ತೇವೆ. ಕೇಂದ್ರದಲ್ಲಿ ಕುಮಾರಸ್ವಾಮಿ ಇದ್ದು, ಅವರು ರಾಜ್ಯಕ್ಕೆ ಗೊಬ್ಬರ ಕೊಡಿಸಲಿ ಎಂದು ಹೇಳಿದ್ದಾರೆ.
























