ದ್ವಿಶತಕ ದಾಟಿದ ಫಲಾನುಭವಿಗಳ ಸಂಖ್ಯೆ – ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಪುತ್ತೂರು: ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮತ್ತುಕೆವಿಜಿ ವೈದ್ಯಕೀಯ ಮಹಾವಿದ್ಯಾಲಯಗಳ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಒಟ್ಟು ಇನ್ನೂರಕ್ಕೂ ಮಿಕ್ಕಿದ ಸಂಖ್ಯೆಯ ಆರೋಗ್ಯಾಕಾಂಕ್ಷಿಗಳು ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು.

ಯಶಸ್ವೀ ಶಿಬಿರ
ಇದೊಂದು ಅತ್ಯಂತ ಪ್ರಯೋಜನಕಾರಿ ಮತ್ತು ಸಕಾಲಿಕವಾದ ಶಿಬಿರವಾಗಿತ್ತು ಎಂದು ಫಲಾನುಭವಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಶಿಬಿರದಲ್ಲಿ ವಿತರಿಸಲಾದ ಆಹಾರದ ಗುಣಮಟ್ಟವು ಅತಿ ಉತ್ತಮವಾಗಿತ್ತು ಎಂದು ಕೆವಿಜಿ ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿಗಳು ಪ್ರತಿಕ್ರಿಯಿಸಿದ್ದಾರೆ.





















































 
 

ಎಲ್ಲವೂ ಉಚಿತ
ರಕ್ತದೊತ್ತಡ ಮತ್ತು ಸಕ್ಕರೆ ಪ್ರಮಾಣ ಪರೀಕ್ಷೆ, ಕಣ್ಣಿನ ಪರೀಕ್ಷೆ, ಇ. ಸಿ. ಜಿ. ಪರೀಕ್ಷೆ ಹಾಗೂ ಸಾಮಾನ್ಯ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಯಿತು. ಕೆಮ್ಮು, ಅಜೀರ್ಣ, ಹೊಟ್ಟೆನೋವು, ಮಾಂಸಖಂಡಗಳ ನೋವು ನಿವಾರಕ ಔಷಧಿಗಳನ್ನೂ ಉಚಿತವಾಗಿ ನೀಡುವುದರೊಂದಿಗೆ ಟೂತ್’ಪೇಸ್ಟ್’ನ್ನೂ ಸಹ ನೀಡಲಾಯಿತು.

ಒಟ್ಟು 32 ವೈದ್ಯರು ಮತ್ತು 17 ಸಿಬ್ಬಂದಿಗಳ ಭಾಗೀದಾರಿಕೆ

ಕೆವಿಜಿ ಮೆಡಿಕಲ್ ಕಾಲೇಜಿನ ಡಾ. ಕಿರಣ್. ಡಾ. ಸೆಬಿನ್, ಡಾ. ವೆಂಪಾ, ಡಾ. ಯಶ್ವಿನ್, ಡಾ. ಮನೀಶ್, ಡಾ. ಸಂತೋಷ್ ಕುಮಾರ್, ಡಾ. ಅರ್ಜುನ್, ಡಾ. ನವಿತಾ, ಡಾ. ಹರ್ಷ, ಡಾ. ಪ್ರಸಾದ್, ಡಾ. ಚೈತ್ರಾ ಕೆ. ಎಸ್., ಡಾ. ಪ್ರಜ್ಞಾ ಎಂ., ಡಾ. ದಿವ್ಯಾ, ಡಾ. ಅಕ್ಷತಾ, ಡಾ. ವಾಸವಿ, ಡಾ. ಹರ್ಷಿತಾ, ಡಾ. ಸೌಮ್ಯಾ, ಡಾ. ಇಬ್ರಾಹಿಂ,
ಶ್ರೀಮತಿ ಆಶಾ ಪಿ. ಎ., ಖದೀಜಾ ಫಜಾ, ಇಸ್ರಾ, ಉಮ್ಮರ್, ಶ್ರೀಮತಿ ಮಲ್ಲಿಕಾ, ಶ್ರೀಮತಿ ಪುಷ್ಪಾ, ಶ್ರೀಮತಿ ಹೇಮಲತಾ, ಪೂವಪ್ಪ, ಭವಾನಿ, ಕುಸುಮಾಧರ, ಅಭಿದಾ ಮತ್ತು
ಸಾರ್ವಜನಿಕ ಸಂಪರ್ಕಾಧಿಕಾರಿ ರಘುಪತಿ ಯು.ಎಂ. ಹಾಗೂ ಕೆವಿಜಿ ಆಯುರ್ವೇದ ಕಾಲೇಜಿನ ಡಾ. ವಿಜಯಲಕ್ಷ್ಮೀ ಪಿ. ಬಿ., ಡಾ. ಪ್ರಮೋದ್ ಪಿ . ಎ., ಡಾ. ರಶ್ಮಿ ಕೆ. ಎಸ್., ಡಾ. ಅರ್ಚನಾ ಎಸ್. ಬಾಬು, ಡಾ. ಕೃತಿ ಅಮೈ, ಡಾ. ಧನ್ಯಶ್ರೀ ಯು. ಬಿ., ಡಾ. ಕೃಪಾಲ್ ಕೃಷ್ಣ, ಡಾ. ದೀಕ್ಷಾ ಪಿ. ಜೆ., ಡಾ. ಸನಲ್ ಎಂ. ವಿ., ಡಾ. ಚೌಹಾಣ್ ಸುಮನ್, ಡಾ. ಸಂತೋಷ್, ಡಾ. ನಿತಿನ್ ಎಸ್., ಡಾ. ಶ್ರೀಲಕ್ಷ್ಮೀ ಜೆ. ಎಸ್., ಡಾ. ಅಭೀಕ್ಷಾ ಎಸ್. ಎಸ್., ಶ್ರೀಮತಿ ರತ್ನಾ ಬಿ. ಜೆ., ಶ್ರೀಮತಿ ಮಮತಾ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಜಾನಕಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ವಿನಯ್ ಕುಮಾರ್ ಬಿ. ಡಿ. ಸಹಕರಿಸಿದರು.

ಸಹಕರಿಸಿದ ಆಡಳಿತ ಮಂಡಳಿ, ಸಹಭಾಗಿತ್ವ ನೀಡಿದ ಸಂಸ್ಥೆಗಳು, ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಹಾಗೂ ಮಾಧ್ಯಮದವರನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸೌಮ್ಯಾಶ್ರೀ ಹೆಗ್ಡೆ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

error: Content is protected !!
Scroll to Top