ನವದೆಹಲಿ: ಭಾರತ ಮತ್ತು ಪಾಕ್ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರುಗಳ ನಡುವಿನ ನೇರ ಮಾತುಕತೆಯೇ ಕದನ ವಿರಾಮಕ್ಕೆ ಕಾರಣ ಎಂದು ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಉಭಯ ರಾಷ್ಟ್ರಗಳ ನಡುವಿನ ಕದನ ವಿರಾಮಕ್ಕೆ ಅಮೆರಿಕಾದ ಮಧ್ಯಸ್ಥಿಕೆ ಕಾರಣವೇ ಎಂಬ ಪ್ರಶ್ನೆಗೆ ವಿದೇಶಾಂಗ ಸಚಿವಾಲಯ ಈ ಮಾಹಿತಿಯನ್ನು ಲಿಖಿತ ರೂಪದಲ್ಲಿ ತಿಳಿಸಿರುವುದಾಗಿದೆ.
ಮೊದಲು ಪಾಕಿಸ್ತಾನವೇ ಕದನ ವಿರಾಮದ ಪ್ರಸ್ತಾಪ ಮಾಡಿದೆ. ಮೇ 10 ರಂದು ಎರಡೂ ರಾಷ್ಟ್ರಗಳ DGMOs ನೇರ ಮಾತುಕತೆ ನಡೆಸಿದ್ದು, ಇದರ ಪರಿಣಾಮ ಎಂಬಂತೆ ಮಿಲಿಟರಿ ಕಾರ್ಯಾಚರಣೆ, ಗುಂಡಿನ ದಾಳಿ ನಿಲ್ಲಿಸಲು ಒಪ್ಪಿರುವುದಾಗಿ ತಿಳಿಸಿದೆ.
























