ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಶರವೂರಿನಲ್ಲಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ, ಕುಂಕುಮಾರ್ಚನೆ ‌ಸಂಪನ್ನ

ಕಡಬ: ತಾಲೂಕಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ಇಲ್ಲಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ಮತ್ತು ಕುಂಕುಮಾರ್ಚನೆ ‌ನಡೆಯಿತು.

ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಕುಡುಪು ನರಸಿಂಹ ತಂತ್ರಗಳ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಸಾವಿರಾರು ಭಕ್ತರು ಭಾಗವಹಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು. ಹಾಗೆಯೇ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ಸಹ ಅವರು ನೀಡಿದರು.





















































 
 

ದೇಗುಲದಲ್ಲಿ ಜುಲೈ 29 ರಂದು ನಾಗರ ಪಂಚಮಿ ಪ್ರಯುಕ್ತ ನಾಗತಂಬಿಲ, ಕ್ಷೀರಾಭಿಷೇಕ ಸೇವೆ ನಡೆಯಲಿದೆ. ಹಾಗೆಯೇ ಗಣೇಶ ಚತುರ್ಥಿ ಪ್ರಯುಕ್ತ ಆಗಸ್ಟ್ 27 ರಂದು 108 ತೆಂಗಿನಕಾಯಿ ಗಣಪತಿ ಹೋಮ ನಡೆಯಲಿದೆ.

error: Content is protected !!
Scroll to Top