ಧರ್ಮಸ್ಥಳ ಪ್ರಕರಣ : ತನಿಖೆ ಅಧಿಕೃತವಾಗಿ ಆರಂಭ

ಧರ್ಮಸ್ಥಳಕ್ಕೆ ಆಗಮಿಸಿ ದಾಖಲೆಗಳನ್ನು ಪಡೆದುಕೊಂಡ ಎಸ್‌ಐಟಿ ಅಧಿಕಾರಿಗಳು

ಬೆಳ್ತಂಗಡಿ : ಧರ್ಮಸ್ಥಳ ವ್ಯಾಪ್ತಿಯಲ್ಲಿ ಶವ ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ತಂಡದ ಅಧಿಕಾರಿಗಳು ಶುಕ್ರವಾರ ಧರ್ಮಸ್ಥಳ ಠಾಣೆಯಿಂದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇದರೊಂದಿಗೆ ಈ ಪ್ರಕರಣದ ಎಸ್‌ಐಟಿ ತನಿಖೆ ಅಧಿಕೃತವಾಗಿ ಪ್ರಾರಂಭವಾದಂತಾಗಿದೆ.

ಎಸ್‌ಐಟಿ ತಂಡದ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು ಧರ್ಮಸ್ಥಳ ಠಾಣೆಗೆ ಆಗಮಿಸಿದ್ದರು.
ಧರ್ಮಸ್ಥಳ ಠಾಣೆಯ ಪಿ.ಎಸ್.ಐ ಸಮರ್ಥ್ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಶುಕ್ರವಾರದಿಂದಲೇ ಅಧಿಕೃತವಾಗಿ ತನಿಖಾ ಕಾರ್ಯ ಆರಂಭವಾಗಿರುವುದಾಗಿ ತಿಳಿದುಬಂದಿದೆ.





















































 
 

ಎಸ್‌ಐಟಿ ಅಧಿಕಾರಿಗಳ ಇನ್ನೊಂದು ತಂಡ ಮಂಗಳೂರಿಗೆ ಆಗಮಿಸಿದೆ. ಡಿಐಜಿ ಎಂ.ಎನ್‌.ಅನುಚೇತ್‌ ಮಂಗಳೂರಿಗೆ ಆಗಮಿಸಿ ಇತರ ಪೊಲೀಸ್‌ ಅಧಿಅಕರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿರುವ ಖಾಸಗಿ ಟಿವಿ ವಾಹಿನಿ ಮತ್ತು ಅದರ ಮುಖ್ಯಸ್ಥ ಬಹಿರಂಗವಾಗಿ ನೀಚರಲ್ಲೇ ನೀಚ ಎಂದು ನಿಂದಿಸುತ್ತಿರುವುದಾಗಿ ಪರಮೇಶ್ ವಿ.ಬೆಳತ್ತೂರು ಎಂಬವರು ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಕ್ಷಿಗೆ ಸಾರ್ವಜನಿಕವಾಗಿ ಅವಮಾನ ಮಾಡಬೇಕು ಎಂಬ ಉದ್ದೇಶದಿಂದ ನೀಚರಲ್ಲೇ ನೀಚ ಎಂದು ಜಾತಿಯನ್ನು ಉದ್ದೇಶಿಸಿ ಮಾಡಿರುವ ಅವಮಾನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧವಾಗಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜು.3ರಂದು ಧರ್ಮಸ್ಥಳದ ದೂರುದಾರ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಆ ಬಳಿಕ, ದೂರುದಾರ ತಾನು ಕೆಳಜಾತಿಗೆ ಸೇರಿದ್ದು, ಧರ್ಮಸ್ಥಳದ ಕೆಲವರು ತಮ್ಮ ಪ್ರಭಾವ ಬಳಸಿ,ನೂರಾರು ಪುರುಷರು, ಯುವತಿಯರು ಮತ್ತು ಮಹಿಳೆಯರ ಮೃತದೇಹಗಳನ್ನು ಹೂತು ಹಾಕಿಸಿದ್ದಾರೆ ಎಂದು ಅವರು ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಖಾಸಗಿ ಟಿವಿ ವಾಹಿನಿಯು ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿರುವ ಮಾಧ್ಯಮಗಳಲ್ಲಿ, ಕಳೆದ ಮೂರು ದಿನಗಳಿಂದ ಸತತವಾಗಿ ಆ ವ್ಯಕ್ತಿಯನ್ನು ಹುಚ್ಚ, ನೀಚ, ನೀಚರಲ್ಲೇ ನೀಚ ಎಂದು ಸಾರ್ವಜನಿಕವಾಗಿ ನಿಂದಿಸುತ್ತಿದ್ದಾರೆ. ಈ ರೀತಿಯ ಹೇಳಿಕೆಗಳು ಕಾನೂನಿನತೀವ್ರ ಸ್ವರೂಪದ ಉಲ್ಲಂಘನೆಯಾಗಿರುತ್ತದೆ ಎಂದು ಸಾಮಾಜಿಕ ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

error: Content is protected !!
Scroll to Top