ಭಾರತ – ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದಿಂದ ಮೀನುಗಾರರಿಗೆ ಅನುಕೂಲ: ಯಶ್‌ಪಾಲ್ ಸುವರ್ಣ

ಉಡುಪಿ: ಭಾರತದ ಮೀನುಗಾರಿಕೆ ಹಾಗೂ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಬ್ರಿಟನ್ ವಿಧಿಸುತ್ತಿದ್ದ ‌ಸುಂಕವು ಭಾರತ – ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ರದ್ದಾಗಿದ್ದು, ಇದರಿಂದ ಮೀನುಗಾರಿಕಾ ವಲಯಕ್ಕೆ ಸಾಕಷ್ಟು ಅನುಕೂಲಗಳಾಗಲಿವೆ ಎಂದು ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಜನಕೇಂದ್ರಿತ ವ್ಯಾಪಾರ ರಾಜತಾಂತ್ರಿಕ ಮುಂದಾಲೋಚನೆಗೆ ಈ ಕ್ರಮ ಸಾಕ್ಷಿಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕೃಷಿ ರಫ್ತು ವಿಷಯಕ್ಕೆ ಸಂಬಂಧಿಸಿದ ಹಾಗೆ 95% ಕೃಷಿ ರಫ್ತು ಸುಂಕ ಮನ್ನಾ ಮಾಡಿರುವುದು ರೈತರಿಗೆ ಮತ್ತು ಸಾಗರೋತ್ಪನ್ನಗಳಿಗೆ ಸಂಬಂಧಿಸಿದ ಹಾಗೆ 99% ಸಾಗರ ರಫ್ತುಗಳ ಮೇಲೆ ಶೂನ್ಯ ಸುಂಕ ಜಾರಿಗೊಳಿಸಿರುವುದು ಮೀನುಗಾರರಿಗೆ ಅನುಕೂಲ ಒದಗಿಸಲಿದೆ. ಇದು ಭಾರತದ ರಫ್ತುದಾರರಿಗೆ ಹೆಚ್ಚಿನ ಬೆಲೆ ಸಿಗುವ ಕಾರಣದಿಂದಲೂ ಪ್ರಾಮುಖ್ಯತೆ ಪಡೆದಿದೆ ಎಂದು ಹರ್ಷಿಸಿದ್ದಾರೆ.





















































 
 
error: Content is protected !!
Scroll to Top